ಟಿ.ಎಮ್.ಶಹೀದ್ ರವರ ಹುಟ್ಟು ಹಬ್ಬದ ಸುವರ್ಣ ಸಂಭ್ರಮ – ಅರ್ಥಪೂರ್ಣ ಆಚರಣೆ…
ಸುಳ್ಯ :ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಮ್.ಶಹೀದ್ ರವರ ಹುಟ್ಟು ಹಬ್ಬದ ಸುವರ್ಣ ಸಂಭ್ರಮವನ್ನು ಇಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ತೆಕ್ಕಿಲ್ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸುವರ್ಣ ಸಂಭ್ರಮ ಆರಂಭಗೊಂಡಿತು. ನಂತರ ಶಹೀದ್ ಅವರು ಕಲ್ಲುಗುಂಡಿ ಸಂತ ಪ್ರಾನ್ಸಿಸ್ ಕ್ಲೇವಿಯರ್ ಚರ್ಚ್ ಭೇಟಿ ನೀಡಿದರು.ಫಾದರ್ ಪ್ಲಾವ್ ಕ್ರಾಸ್ತಾ ರವರು ಟಿ.ಎಮ್.ಶಹೀದ್ ರವರಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ಅಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಫಾದರ್ ಪ್ಲಾವ್ ಕ್ರಾಸ್ತಾ ಮಾತನಾಡಿ ಜೀವನದಲ್ಲಿ ಉದ್ದೇಶವಿಲ್ಲದೇ ಬದುಕಬಾರದು. ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಬೇಕು. ಟಿ.ಎಮ್.ಶಹೀದ್ ಅವರು ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರು ಜಾತಿ ಧರ್ಮದ ಎಲ್ಲೆಯನ್ನು ಮೀರಿ, ಸೌಹಾರ್ದತೆಯನ್ನು ಮೈಗೂಡಿಸಿ, ಎಲ್ಲರೊಂದಿಗೆ ಬೆರೆತು ಜೀವನ ನಡೆಸುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು. ಸುವರ್ಣ ಸಂಭ್ರಮದ ಅಧ್ಯಕ್ಷ ಸದಾನಂದ ಮಾವಜಿ,ಲಿಸ್ಸಿ ಮೊನಾಲಿಸಾ,ತಾಜ್ ಮಹಮ್ಮದ್,ಹಂಸ ಕಲ್ಲುಗುಂಡಿ,ದಿನಕರ ಸಣ್ಣಮನೆ,ಅಶ್ರಫ್ ಗುಂಡಿ,ಮುಂತಾದವರು ಉಪಸ್ಥಿತರಿದ್ದರು .
ನಂತರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿದ ಶಹೀದ್ ಅವರು ಮತ್ಸ್ಯ ತೀರ್ಥಕ್ಕೆ ತೆರಳಿ ಮೀನುಗಳಿಗೆ ಆಹಾರ ನೀಡಿದರು. ಈ ಸಂದರ್ಭದಲ್ಲಿ ಡಾ. ಎನ್.ಎ.ಜ್ಞಾನೇಶ್, ಡಾ.ಸಾಯಿಗೀತಾ, ಸದಾನಂದ ಮಾವಜಿ,ಶೇಷಗಿರಿ, ,ಧನುರಾಜ್,ಮುಸ್ತಫಾ ಸುಳ್ಯ ,ರಿಯಾಜ್ ಸುಳ್ಯ ,ಸಿದ್ದೀಕ್ ಕೊಕ್ಕೊ,ಹಂಸ ಕಲ್ಲುಗುಂಡಿ,ರಿಯಾಜ್ ಕಲ್ಲುಗುಂಡಿ ಮುಂತಾದವರು ಉಪಸ್ಥಿತರಿದ್ದರು.
ಬಳಿಕ ಶಹೀದ್ ಅವರು ಪೇರಡ್ಕ ವಲಿಯುಲ್ಲಾಹಿ ದರ್ಗಾ ಕ್ಕೆ ಭೇಟಿ ನೀಡಿ ಪ್ರಾರ್ಥನೆ ಗೈದು, ತನ್ನ ಅಜ್ಜ ದಿವಂಗತ ತೆಕ್ಕಿಲ್ ಮಹಮ್ಮದ್ ಹಾಜಿ ಮತ್ತು ಕುಟುಂಬದಲ್ಲಿ ಮರಣ ಹೊಂದಿದರವರ ದಫನ ಭೂಮಿಗೆ ತೆರಳಿ ಪ್ರಾರ್ಥಿಸಿದರು. ಸ್ಥಳೀಯ ಖತೀಬರಾದ ಸುಹೇಲ್ ಬಾಖವಿ,ಝಕರಿಯಾ ದಾರಿಮಿ ಅರ್ಕಾನ, ಸದಾನಂದ ಮಾವಜಿ,ದಿನಕರ ಸಣ್ಣ ಮನೆ,ಅಶ್ರಫ್ ಗುಂಡಿ, ರಝಾಖ್ ಹಾಜಿ ಮೊಟ್ಟಂಗಾರ್ ಉಪಸ್ಥಿತರಿದ್ದರು.