ಸುದ್ದಿ

ಹಿರಿಯ ವಿದ್ವಾಂಸ ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ನಿಧನಕ್ಕೆ ಟಿ.ಎಂ.ಶಾಹೀದ್ ತೆಕ್ಕಿಲ್ ಸಂತಾಪ…

ಸುಳ್ಯ: ಹಿರಿಯ ವಿದ್ವಾಂಸ ಉಡುಪಿ,ಚಿಕ್ಕಮಗಳೂರು,ಹಾಸನ,ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರ ನಿಧನಕ್ಕೆ ಕೆ.ಪಿ.ಸಿ.ಸಿ.ಯ ಮಾಜಿ ಕಾರ್ಯದರ್ಶಿ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಾಹೀದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿರುತ್ತಾರೆ.
ಕರ್ಮ ಶಾಸ್ತ್ರ, ಖಗೋಳ ಶಾಸ್ತ್ರದ ಬಗ್ಗೆ ಉನ್ನತ ಜ್ಞಾನ ಹೊಂದಿರುವ ಅವರು ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷರಾಗಿ,ಜಾಮಿಯಾ ಸಅದಿಯ ಅರಬಿಯಾ ಶರೀಅತ್ ಕಾಲೇಜಿನ ಪ್ರಾಚಾರ್ಯರಾಗಿ,ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರದ ಸದಸ್ಯರಾಗಿ ಸೇವೆ ಸಲ್ಲಿಸಿರುವ ಶ್ರೀಯುತರ ನಿಧನದಿಂದ ಉಲಮಾ ವರ್ಗಕ್ಕೆ ಮತ್ತು ಮುಸ್ಲಿಂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.ಅವರ ಅಗಲುವಿಕೆಯಿಂದ ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಮತ್ತು ಮಗ್ಫಿರತ್ ನ್ನು ಅನುಗ್ರಹಿಸಲಿ ಎಂದು ಟಿ.ಎಂ.ಶಾಹೀದ್ ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿರುತ್ತಾರೆ.

ಟಿ.ಎಂ.ಶಾಹೀದ್

Related Articles

Leave a Reply

Your email address will not be published.

Back to top button