ಸುದ್ದಿ

ಎಡನೀರು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿ ನಿಧನಕ್ಕೆ ಟಿ.ಎಮ್ .ಶಹೀದ್ ತೆಕ್ಕಿಲ್ ಸಂತಾಪ…

ಸುಳ್ಯ: ಶ್ರೀ ಮದ್ ಶಂಕರಾಚಾರ್ಯ ಪರಂಪರೆಯ ಎಡನೀರು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿ ನಿಧನಕ್ಕೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಧಾರ್ಮಿಕ, ಸಮಾಜಿಕ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿ ಹೆಸರು ವಾಸಿಯಾಗಿದ್ದರು. ಅವರು ಸುಮಧುರ ಕಂಠಸಿರಿಯ ಯಕ್ಷಗಾನ ಭಾಗವತರು, ಉತ್ತಮ ವಾಗ್ಮಿ, ಭಾಷಾ ಪ್ರಭುತ್ವ ಹೊಂದಿದ ವಿದ್ವಾಂಸರಾಗಿದ್ದು, ಸಂಗೀತ, ಕಲೆ, ಶಿಕ್ಷಣ, ಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹ, ಕೊಡುಗೆ ನೀಡಿದ್ದಾರೆ.ಶ್ರೀಗಳು ನಮ್ಮ ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಸೌಹಾರ್ದತೆ ಕೊಂಡಿಯಾಗಿದ್ದರು. ಶ್ರೀಗಳ ಆಗಲಿಕೆ ತುಂಬಲಾರದ ನಷ್ಟ ಎಂದು ಟಿ.ಎಮ್.ಶಹೀದ್ ತೆಕ್ಕಿಲ್ ಸಂತಾಪ ಸೂಚಿಸಿದ್ದಾರೆ.

ಟಿ.ಎಮ್ .ಶಹೀದ್

Related Articles

Leave a Reply

Your email address will not be published.

Back to top button