ಸುದ್ದಿ

ಪದವಿ ವ್ಯಾಸಂಗಕ್ಕಾಗಿ ಲಂಡನ್ ಗೆ ಪ್ರಯಾಣ ಕೈಗೊಂಡ ಟಿ.ಎಂ. ಶಾಝ್ ತೆಕ್ಕಿಲ್ ರವರಿಗೆ ಬೀಳ್ಕೊಡುಗೆ ಸಮಾರಂಭ…

ಸುಳ್ಯ: ಸಂಪಾಜೆ ಗೂನಡ್ಕದ ತೆಕ್ಕಿಲ್ ಶಿಕ್ಷಣದ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಟಿ. ಎಂ. ಶಹೀದ್ ತೆಕ್ಕಿಲ್ ರವರ ಹಿರಿಯ ಪುತ್ರ, ತೆಕ್ಕಿಲ್ ಸಮೂಹ ವಿದ್ಯಾಸಂಸ್ಥೆ ಗೂನಡ್ಕ ಹಳೆ ವಿದ್ಯಾರ್ಥಿ ಹಾಗೂ ಆಡಳಿತ ಸಮಿತಿ ಉಪಾಧ್ಯಕ್ಷರಾದ ಟಿ.ಎಂ. ಶಾಝ್ ತೆಕ್ಕಿಲ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಪದವಿ ವ್ಯಾಸಂಗಕ್ಕಾಗಿ ಲಂಡನ್ ರೋಹಮ್ಟಾನ್ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ದೊರಕಿದ್ದು ಲಂಡನ್ ಗೆ ತೆರಳುವ ಸಂದರ್ಭದಲ್ಲಿ, ತೆಕ್ಕಿಲ್ ಸಮೂಹ ವಿದ್ಯಾಸಂಸ್ಥೆ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಣಿ ಕೆ. ಮಾತನಾಡಿ ಶಾಝ್ ತೆಕ್ಕಿಲ್ ನಲ್ಲಿರುವ ವಿಧೇಯತೆ, ನಾಯಕತ್ವ ಗುಣ ಮತ್ತು ಗುಣನಡತೆಯನ್ನು ಕೊಂಡಾಡಿದರು. ಮುಖ್ಯ ಅತಿಥಿ ಶ್ರೀ ದಾಮೋದರ ಮಾಸ್ತರ್ ರವರು ಶಾಲು ಹೊದಿಸಿ ಸನ್ಮಾನಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭಹಾರೈಸಿ ಭವಿಷ್ಯದಲ್ಲಿ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಹೇಳಿದರು ಶಾಲಾ ವಿದ್ಯಾರ್ಥಿ ನಾಯಕನಾಗಿ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ ಶಾಝ್ ನನ್ನ ಮಗನಂತೆ ಎಂದು ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು. ಶಾಲಾ ಆಡಳಿತಾಧಿಕಾರಿ ಶ್ರೀ ರಹೀಂ ಬೀಜದಕಟ್ಟೆ ಮಾತನಾಡಿ ಗ್ರಾಮೀಣ ಪ್ರದೇಶದಿಂದ ಲಂಡನ್ ಗೆ ಪದವಿ ಪಡೆಯಲು ತೆರಳುತ್ತಿದ್ದು ನಮ್ಮ ಸಂಸ್ಥೆಗೆ ಹಾಗೂ ಊರಿಗೆ ಅಭಿಮಾನ ಎಂದು ಶುಭಾ ಹಾರೈಸಿದರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನಕರ ಸಣ್ಣಮನೆಯವರು ಮಾತನಾಡಿ ಮುಂದೆ ತೆಕ್ಕಿಲ್ ಶಿಕ್ಷಣ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಬೆಳೆಸಲು ನಿಮ್ಮ ವಿದೇಶದ ವಿದ್ಯಾಭ್ಯಾಸ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.
ಶಿಕ್ಷಕಿ ಶ್ರೀಮತಿ ಉಷಾ ಬೀಳ್ಕೊಡುಗೆ ಭಾಷಣ ಮಾಡಿದರು. ಶಾಲಾ ಆಡಳಿತಮಂಡಳಿ ಅಧ್ಯಕ್ಷರಾದ ಟಿ. ಎಂ. ಶಹೀದ್ ತೆಕ್ಕಿಲ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶ್ರೀಮತಿ ಲೋಕೇಶ್ವರಿ ಸ್ವಾಗತಿಸಿದರು, ಶ್ರೀಮತಿ ಧನ್ಯ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ತಾಹಿರಾ ವಂದಿಸಿದರು. ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿ ಶುಭ ಹಾರೈಸಿದರು.

Related Articles

Back to top button