ಸುದ್ದಿ

ಮಂಗಳವಾರ – ದ.ಕ 79 , ಉಡುಪಿ 7 ಹಾಗೂ ರಾಜ್ಯದಲ್ಲಿ 317 ಕೊರೊನ ಪ್ರಕರಣ ಪತ್ತೆ…

ಮಂಗಳೂರು: ಇಂದು (ಮಂಗಳವಾರ) ದ.ಕ ಜಿಲ್ಲೆಯಲ್ಲಿ 79 , ಉಡುಪಿ ಜಿಲ್ಲೆಯಲ್ಲಿ 7 ಹಾಗೂ ರಾಜ್ಯದಲ್ಲಿ 317 ಕೊರೊನ ಪ್ರಕರಣ ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಪತ್ತೆಯಾದ 79 ಪ್ರಕರಣಗಳ ಪೈಕಿ 75 ಮಂದಿ ಸೌದಿಯಿಂದ ಬಂದವರೆಂದು ಹೇಳಲಾಗಿದೆ.
ಇನ್ನು ಇಂದು ರಾಜ್ಯದಲ್ಲಿ 317 ಮಂದಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7530 ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ 7 ಸೋಂಕಿತರು ಮೃತಪಟ್ಟಿದ್ದು, ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.
ರಾಜ್ಯಾದ್ಯಂತ ಇಂದು ಒಟ್ಟು 322 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ನಿಂದ ಗುಣಮುಖರಾದವರ ಸಂಖ್ಯೆ 4456ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ 2976 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಗಂಭೀರ ಸ್ಥಿತಿಯಲ್ಲಿರುವ 72 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 78 ಮಂದಿ ಸೋಂಕಿತರು ಅಂತಾರಾಷ್ಚ್ರೀಯ ಪ್ರಯಾಣಿಕರಾಗಿದ್ದು, 108 ಮಂದಿ ಸೋಂಕಿತರು ಅಂತರ್ ರಾಜ್ಯ ಪ್ರಯಾಣ ಹಿನ್ನಲೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Related Articles

Leave a Reply

Your email address will not be published.

Back to top button