ಮಂಗಳವಾರ – ದ.ಕ. ಜಿಲ್ಲೆಯಲ್ಲಿ 23 ಕೊರೊನಾ ಪಾಸಿಟಿವ್, ಉಡುಪಿಯಲ್ಲಿ ಪಾಸಿಟಿವ್ ಪ್ರಕರಣಗಳಿಲ್ಲ…

ಮಂಗಳೂರು: ಇಂದು (ಮಂಗಳವಾರ) ದ.ಕ. ಜಿಲ್ಲೆಯಲ್ಲಿ 23 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಹಾಗೂ ಉಡುಪಿಯಲ್ಲಿ ಇಂದು ಪಾಸಿಟಿವ್ ಪ್ರಕರಣಗಳಿಲ್ಲ.
ದ.ಕ. ಜಿಲ್ಲೆಯ 23 ಪ್ರಕರಣಗಳಲ್ಲಿ ಇಬ್ಬರು ಮಹಾರಾಷ್ಟ್ರದಿಂದ, ಮೂವರು ದುಬೈನಿಂದ, ಉಳಿದ 18 ಮಂದಿ ಸೌದಿಯಿಂದ ಮರಳಿದವರಾಗಿದ್ದಾರೆ. ಈ ಎಲ್ಲಾ 23 ಮಂದಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು 103 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇನ್ನು ರಾಜ್ಯದಲ್ಲಿ 161 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5921ಕ್ಕೆ ಏರಿಕೆಯಾಗಿದೆ. ಇಂದು 164 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಯಾದಗಿರಿಯಲ್ಲಿ 61, ಬೆಂಗಳೂರು ನಗರದಲ್ಲಿ 29, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23, ಕಲಬುರಗಿಯಲ್ಲಿ 10, ಬೀದರ್ ನಲ್ಲಿ 9, ದಾವಣಗೆರೆಯಲ್ಲಿ 8, ಕೊಪ್ಪಳದಲ್ಲಿ 6, ಶಿವಮೊಗ್ಗದಲ್ಲಿ 4, ವಿಜಯಪುರ, ಚಿಕ್ಕಬಳ್ಳಾಪುರ, ಮೈಸೂರು ಮತ್ತು ಧಾರವಾಡದಲ್ಲಿ ತಲಾ 2, ಬಾಗಲಕೋಟೆ, ತುಮಕೂರು, ಚಾಮರಾಜನಗರದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.

Sponsors

Related Articles

Leave a Reply

Your email address will not be published. Required fields are marked *

Back to top button