ಸುದ್ದಿ

ಅಯನಾ.ವಿ. ರಮಣ್ ಗೆ ಅವಳಿ ಡಿಸ್ಟಿಂಕ್ಷನ್ …

ಮೂಡುಬಿದಿರೆ : ಇಲ್ಲಿನ ಬಹುಮುಖ ಪ್ರತಿಭೆಯ ಅಯನಾ. ವಿ. ರಮಣ್ 2022 – 2023 ರ ಶೈಕ್ಷಣಿಕ ವರ್ಷದಲ್ಲಿ ಎರಡು ವಿಚಾರಗಳಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅವಳಿ ಡಿಸ್ಟಿಂಕ್ಷನ್ ನ ಅಪರೂಪದ ಸಾಧನೆ ದಾಖಲಿಸಿದ್ದಾರೆ.
ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಶಿಷ್ಯೆಯಾಗಿ , ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಭರತನಾಟ್ಯದ ಅಂತಿಮ ವಿದ್ವತ್ ಪರೀಕ್ಷೆ ಯಲ್ಲಿ ಅತ್ಯುತ್ತಮವಾದ ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

ಕೋವಿಡ್ ಕಾರಣದಿಂದಾಗಿ ತಡವಾಗಿ ಘೋಷಣೆಯಾದ ಮಂಗಳೂರು ವಿಶ್ವವಿದ್ಯಾಲಯದ ಪದವಿ ಎರಡನೆ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಅಯನಾ ಅದರಲ್ಲೂ ಡಿಸ್ಟಿಂಕ್ಷನ್ ಸಾಧಿಸಿದ್ದಾರೆ.
ಭರತನಾಟ್ಯದ ಸಾಧನೆಗಾಗಿ ಕೇಂದ್ರ ಸರಕಾರದ ಸಿ ಸಿ ಆರ್ ಟಿ ಸ್ಕಾಲರ್ಶಿಪ್ ಪಡೆಯುತ್ತಿರುವ ಅಯನಾ , ಪದವಿ ಕಲಿಕೆಗಾಗಿಯೂ ಶೈಕ್ಷಣಕ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ದ್ವಿತೀಯ ಕಲಾ ಪದವಿ ವಿದ್ಯಾರ್ಥಿಯಾಗಿರುವ ಅಯನಾ. ವಿ.ರಮಣ್ ಅವರು, ಕಲಾವಿದ – ಪತ್ರಕರ್ತ ಕೆ. ವಿ. ರಮಣ್ – ಆಳ್ವಾಸ್ ಉಪನ್ಯಾಸಕಿ ಡಾ// ಮುಕಾಂಬಿಕ . ಜಿ. ಎಸ್. ದಂಪತಿಯ ಪುತ್ರಿ.
ಬೆಂಗಳೂರಿನ ವಿದ್ವಾನ್ ಸತ್ಯನಾರಾಯಣರಾಜು ಅವರಲ್ಲಿ ಭರತನಾಟ್ಯದ ವಿಶೇಷ ತರಬೇತಿ ಪಡೆಯುತ್ತಿರುವ ಅಯನಾ , ತನ್ನ ಎಂಟನೇ ತರಗತಿಯಿಂದಲೇ ಆಳ್ವಾಸ್ ದತ್ತು ಸ್ವೀಕಾರದ ವಿದ್ಯಾರ್ಥಿಯಾಗಿರುವುದನ್ನು ಇಲ್ಲಿ ನೆನಪಿಸಬಹುದು.

Related Articles

Back to top button