ಯಡಿಯೂರಪ್ಪ ಸರಕಾರದ ಎರಡು ವರುಷ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತ – ಕೆಪಿಸಿಸಿ ಮುಖಂಡ ಟಿ.ಎಂ.ಶಹೀದ್ ತೆಕ್ಕಿಲ್…

ಸುಳ್ಯ: ಎರಡು ವರುಷಗಳ ಹಿಂದೆ ಕುದುರೆ ವ್ಯಾಪಾರದೊಂದಿಗೆ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ ಮುಖ್ಯಮಂತ್ರಿ ಪದವಿಯನ್ನು ಪಡೆದುಕೊಂಡ ಬಿ.ಎಸ್.ಯಡಿಯೂರಪ್ಪ ರವರ ನೇತೃತ್ವದ ಸರಕಾರ ಎರಡು ವರುಷಗಳಲ್ಲಿ ಕೇವಲ ಪತ್ರಿಕಾ ಪ್ರಚಾರ, ಪಕ್ಷ ಸಂಘಟನೆ, ಭಿನ್ನಮತಗಳಲ್ಲೆ ತಮ್ಮ ಸಮಯವನ್ನು ಕಳೆದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಟಿ.ಎಂ.ಶಹೀದ್ ತೆಕ್ಕಿಲ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಕೋವಿಡ್ ಸಂಕಷ್ಠ ಕಾಲದಲ್ಲಿ ಕೂಡ ವ್ಯಾಪಕವಾದಂತಹ ಭ್ರಷ್ಠಾಚಾರ, ಅವ್ಯವಹಾರ, ಸಚಿವರುಗಳಲ್ಲಿ ಸಮನ್ವಯತೆ ಇಲ್ಲದಿರುವುದು, ಅನೇಕ ಜನರು ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದದ್ದು, ಅಸಮರ್ಪಕ ಲಸಿಕೆ ಹಂಚಿಕೆ, ಸರಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಮುಂತಾದ ಸಮಸ್ಯೆಗಳನ್ನು ಹತೋಟಿಗೆ ತರುವುದಕ್ಕೆ ವಿಫಲವಾಗಿದ್ದಾರೆ. ಕೋವಿಡ್ ರೋಗಿಗಳ ಮತ್ತು ಸಾವಿಗೀಡಾದವರ ಸಂಖ್ಯೆಯನ್ನು ಮುಚ್ಚಿಟ್ಟಿದ್ದಾರೆ. ಅದರ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ. ರೈತರು ಸಂಕಷ್ಠದಲ್ಲಿದ್ದಾರೆ. ಮಧ್ಯಮ ವರ್ಗದ ಜನರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಕಳೆದ ಎರಡು ವರುಷದಲ್ಲಿ ಈ ಸರಕಾರದ ಸಚಿವರುಗಳು ಗೊಂದಲದ ಹೇಳಿಕೆ, ಪರಸ್ಪರ ಭಿನ್ನಮತ, ಭ್ರಷ್ಟಾಚಾರ, ಅಧಿಕಾರಿಗಳ ಸಮನ್ವಯತೆಯ ಕೊರತೆಯಿಂದ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಪತ್ರಿಕೆಯಲ್ಲಿ ನೂರಾರು ಕೋಟಿ ರೂಪಾಯಿಯ ಜಾಹೀರಾತು ಕೊಟ್ಟು ಕೇವಲ ಪ್ರಚಾರದಲ್ಲಿ ಮಾತ್ರ ಮುಂದೆ ಇದ್ದಾರೆ ವಿನಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಲ್ಲ. ರಾಜ್ಯದ ಆರ್ಥಿಕತೆಯು ಹತ್ತು ವರ್ಷ ಹಿಂದಕ್ಕೆ ಹೋಗಿದೆ ಎಂದು ಕೆಪಿಸಿಸಿ ಮುಖಂಡ ಟಿ.ಎಂ.ಶಹೀದ್ ತೆಕ್ಕಿಲ್ ಆರೋಪಿಸಿದ್ದಾರೆ.

ಕೆಪಿಸಿಸಿಯ ವತಿಯಿಂದ ಗ್ರಾಮದಿಂದ ಹಿಡಿದು ರಾಜ್ಯದ ವರೆಗೆ ಸರಕಾರ ಮಾಡುವುದಕ್ಕಿಂತ ಮಿಗಿಲಾಗಿ ಕಾಂಗ್ರೇಸ್ ಪಕ್ಷ ಮಾಡಿದೆ. ಕೋವಿಡ್ ರೋಗಿಗಳಿಗೆ ಸಹಾಯ , ಕಿಟ್ ವಿತರಣೆ, ಆಂಬ್ಯುಲೆನ್ಸ್ ಪೂರೈಕೆ , ಕೋವಿಡ್ ನಿಂದ ಸಾವಿಗೀಡಾದವರ ಅಂತ್ಯಸಂಸ್ಕಾರ, ಆರ್ಥಿಕ ನೆರವು ಮುಂತಾದವುಗಳನ್ನು ಕಾಂಗ್ರೇಸ್ ಪಾರ್ಟಿಯು ಮಾನವೀಯತೆ ನೆಲಿಯಿಂದ ಮಾಡಿದೆ. ಸರಕಾರದ ಕಾರ್ಯಗಳಿಗಿಂತ ಕೆಪಿಸಿಸಿಯ ಅದ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್ ರವರ ನೇತೃತ್ವದಲ್ಲಿ ಇತರ ಕಾರ್ಯಾಧ್ಯಕ್ಷರುಗಳು, ಕಾಂಗ್ರೇಸ್ ಪಕ್ಷದ ಕೇಂದ್ರದ, ರಾಜ್ಯದ ಮುಖಂಡರು ಮತ್ತು ಕಾರ್ಯಕರ್ತರ ಸಹಕಾರದಿಂದ ಕಾಂಗ್ರೇಸ್ ಪಕ್ಷವು ಮಾಡಿದೆ ಎಂದು ಕಾಂಗ್ರೇಸ್ ಪಕ್ಷವು ಮಾಡಿದಂತಹ ಕಾರ್ಯ ಯೋಜನೆಯನ್ನು ಕೆಪಿಸಿಸಿ ಮುಖಂಡ ಟಿ.ಎಂ.ಶಹೀದ್ ತೆಕ್ಕಿಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Sponsors

Related Articles

Back to top button