ಉಡುಪಿ – 150, ಕಾಸರಗೋಡು- 9 ,ದ.ಕ -ಯಾವುದೇ ಕೊರೊನ ಪ್ರಕರಣ ಪತ್ತೆಯಿಲ್ಲ…
![](wp-content/uploads/2020/04/Covid-19-C-1-jpg.webp)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಮಂಗಳವಾರ) ಯಾವುದೇ ಕೊರೊನ ಪ್ರಕರಣ ಪತ್ತೆಯಾಗಿಲ್ಲ. ಆದರೆ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 150 ಮಂದಿಯಲ್ಲಿ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ 9 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಲಭ್ಯವಾದ ಎಲ್ಲಾ 113 ಮಂದಿಯ ವರದಿಗಳು ನೆಗೆಟಿವ್ ಆಗಿದೆ.
ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ 150 ಪ್ರಕರಣಗಳ ಪೈಕಿ ಬಹುತೇಕರು ಕುಂದಾಪುರ ತಾಲೂಕಿನವರು ಎಂದು ತಿಳಿದುಬಂದಿದೆ. ಉಡುಪಿ ಜಿಲ್ಲೆಯಲ್ಲಿ ಇಂದು 627 ಮಂದಿಯ ವರದಿ ನೆಗೆಟಿವ್ ಬಂದಿದೆ.
ಇನ್ನು ಕಾಸರಗೋಡು ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬಂದ ನಾಲ್ವರು, ಕುವೈಟ್ ನಿಂದ ಬಂದ ಮೂವರು, ಚೆನ್ನೈ ನಿಂದ ಬಂದ ಓರ್ವ ಅಲ್ಲದೆ ಸೋಂಕಿತರ ಸಂಪರ್ಕದಿಂದ ಓರ್ವ ನಲ್ಲಿ ಕೊರೊನಾ ದೃಢಪಟ್ಟಿದೆ.
ರಾಜ್ಯದಲ್ಲಿ ಇಂದು 388 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 3796 ಕ್ಕೆ ಏರಿಕೆ ಕಂಡಿದೆ.