ಮೌಲ್ಯಯುತ ಶಿಕ್ಷಣದಿಂದ ಮಗುವಿನ ಅಮೂಲಾಗ್ರವಾದ ಬದಲಾವಣೆ ಸಾಧ್ಯ -ಶಾಸಕ ರಾಜೇಶ್ ನಾಯಕ್…
ಬಂಟ್ವಾಳ: ಕೇಂದ್ರ ಸರಕಾರ ಶಿಕ್ಷಣ ವ್ಯವಸ್ಥೆ ಯಲ್ಲಿ ಬದಲಾವಣೆಗಳನ್ನು ನಡಸುತ್ತಿದ್ದು ವ್ಯಾಪಕ ಬೆಂಬಲ ವ್ಯಕ್ತವಾಗಿವೆ.
ಶಿಕ್ಷಣ ವ್ಯವಸ್ಥೆಗೆ ಪ್ರೇರಣೆ ನೀಡುವ ಸಮಾಜ ಸೇವಕರು, ಸಂಘ ಸಂಸ್ಥೆಗಳು ಮುಂದೆ ಬಂದಾಗ ಪರಿಣಾಮಕಾರಿ ಬದಲಾವಣೆ ಸಾಧ್ಯ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀಯುತ ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಹೇಳಿದ್ದಾರೆ.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಸರಕಾರದ ಅಧಿಕೃತ ಅನುಮತಿಯೊಂದಿಗೆ ಪ್ರಾರಂಭವಾದ ಆಂಗ್ಲ ಮಾಧ್ಯಮದ ಒಂದನೇ ತರಗತಿಯ ಉದ್ಘಾಟನೆ ಹಾಗೂ ಶಾಲಾ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗದ ಶಿಕ್ಷಣದ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ಗುಣಮಟ್ಟದ ಶಿಕ್ಷಣ ಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಇದೇ ಸಂದರ್ಭದಲ್ಲಿ ಶಾಸಕರು ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸಿ, ಪುಸ್ತಕ ಪೆನ್ಸಿಲ್ ವಿತರಣೆ ಮಾಡಿದರು.
ಕೃಷಿ ಚಟುವಟಿಕೆಗಳು ಎಲ್ಲರ ಆಸಕ್ತಿಯನ್ನು ಚಿಗುರುವಂತೆ ಮಾಡುತ್ತವೆ. ನೋಡಿ ತಿಳಿ ಮಾಡಿ ಕಲಿ ಎಂಬ ಮಾತಿನಂತೆ ಕಲಿಕೆಗೆ ಅನುಕೂಲ ಆಗುವಂತೆ ವೀರಕಂಭ ಗ್ರಾಮ ಪಂಚಾಯತ್ ಉದ್ಯೋಗ ಖಾತರಿ ಯೋಜನೆ ಸಹಾಯ ದಿಂದ ನಿಮಾ೯ಣವಾದ ಎರೆಹುಳ ಗೊಬ್ಬರ ಘಟಕಕ್ಕೆ ಎಲೆಗಳನ್ನು ಹಾಕುವ ಮೂಲಕ ಉದ್ಘಾಟಿಸಿದರು.
4 ವರ್ಷಗಳ ಹಿಂದೆ ಪ್ರಗತಿಪರ ಕೃಷಿಕರಾಗಿ ಶಾಲೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ತಮ್ಮ ಕೈಯಾರೆ ನೆಟ್ಟ ಅಡಿಕೆ ಗಿಡ ಇಂದು ಫಲ ಬಿಡುತ್ತಿದ್ದು ಫಸಲಿನ ಮೊದಲ ಕೊಯ್ಲು ಮಾಡಿದರು.
ಆರೋಗ್ಯ ಇಲಾಖೆಯ ಅವಿರತ ಶ್ರಮದ ಸಹಾಯ ದಿಂದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕರೋನದ ಹರಡುವಿಕೆಯ ವೇಗವನ್ನು ಕಡಿಮೆ ಗೊಳಿಸಲು ಸಾಧ್ಯ ವಾಯಿತು ಎಂದು ಈ ಕಾಯ೯ದಲ್ಲಿ ತೊಡಗಿಸಿಕೊಂಡ ಆರೋಗ್ಯ ಕಾಯ೯ಕತ೯ರ ಜೊತೆಗೆ ಕುಶಲೋಪಚರಿ ಮಾತನಾಡಿದರು.
ಶ್ರೀಯುತ ಗಣೇಶ್ ಭಟ್ ಕಡಂಬಿಲ ಶ್ರೀ ಶಾರದಾ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ದಿನೇಶ್, ಸದಸ್ಯರಾದ ಜನಾರ್ಧನ್ ಗೊಲಿಮಾರ್ ಜಯಂತಿ,ಮೀನಾಕ್ಷಿ, ಉಮಾವತಿ, ಸಂದೀಪ್ ಪೂಜಾರಿ, ಜಯಪ್ರಸಾದ್, ಮಾಜಿ ತಾ.ಪಂ.ಸದಸ್ಯ ರಾದ ಮಾದವ ಮಾವೆ, ಗೀತಾಚಂದ್ರಶೇಖರ್, ನಿವೃತ್ತ ಮುಖ್ಯ ಶಿಕ್ಷಕ ವಿಠಲ ಶೆಟ್ಟಿ, ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥ ಸಿವಿಲ್ ಇಂಜಿನಿಯರ್ ಸಂತೋಷ್ ಕುಮಾರ್ ಶೆಟ್ಟಿ, ಹಿರಿಯ ರಾದ ನಗ್ರಿ ಮೂಲೆ ಈಶ್ವರ ಭಟ್ , ತಿರುಮಲ ಕುಮಾರ್ ಮಜಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ, ಮತ್ತು ಶಾಲಾಭಿವೃದ್ದಿ ಸಮಿತಿ ಸದಸ್ಯರು , ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಮೈರ, ಹಾಗೂ ಸದಸ್ಯರುಗಳು ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ಡಿಜಿಎಂ ಉಗ್ಗಪ್ಪ ಶೆಟ್ಟಿ ಕೊಂಬಿಲ, ವೀರಕಂಭ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬಾಯಿಲ, ವಿಟ್ಲ ಗ್ರಾಮೀಣ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಕಂಭ ಒಕ್ಕೂಟ ಅಧ್ಯಕ್ಷ ಕೊರಗಪ್ಪ ನಾಯ್ಕ, ಜನಜಾಗೃತಿ ವೇದಿಕೆ ಸದಸ್ಯ ವೀರಪ್ಪ ಮೂಲ್ಯ, ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್, ಇಂಜಿನಿಯರ್ ಗಳಾದ ರಾಮ್ ಪ್ರಸಾದ್ ಕೊಂಬಿಲ, ಸಂದೀಪ್ ಕುಮಾರ್ ಶೆಟ್ಟಿ ಅರೆಬೆಟ್ಟು, ರಾಮ ಮೂಲ್ಯ ಮಜಿ, ಹಿರಿಯರಾದ ರಾ ಕೋಡಿ ಈಶ್ವರ ಭಟ್, ಜಯರಾಮ ರೈ ಕಲ್ಲಡ್ಕ, ಸೀತಾರಾಮ್ ಪೊಲೀಸ್, ಮಕ್ಕಳ ಪೋಷಕರು ,ಶಾಲಾ ಶಿಕ್ಷಕರು, ಅಡುಗೆ ಸಿಬ್ಬಂದಿಗಳು, ಹಳೆ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು
ಶಾಲಾ ಮಕ್ಕಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಪ್ರಾಸ್ತಾವಿಕ ವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಂಜೀವ ವಂದಿಸಿದರು.ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು.