ಪೇರಡ್ಕ ಉರೂಸ್ ಕಾರ್ಯಕ್ರಮದಲ್ಲಿ ಗಾಂಧಿ ಗ್ರಾಮ ಪುರಸ್ಕೃತ ಅಧ್ಯಕ್ಷರಾದ ಜಿ.ಕೆ ಹಮೀದ್ ಗೂನಡ್ಕರವರಿಗೆ ಸನ್ಮಾನ…

ಸುಳ್ಯ: ಗೂನಡ್ಕ ಪೇರಡ್ಕ ಉರೂಸ್ ಸಮಾರೋಪ ಸಮಾರಂಭದಲ್ಲಿ ಸಂಪಾಜೆ ಗ್ರಾಮದ ಅಭಿವ್ರದ್ಧಿಯ ಹರಿಕಾರ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ಇವರನ್ನು ಅಂತಾರಾಷ್ಟ್ರೀಯ ಪ್ರಭಾಷನಗರ ನೌಶಾದ್ ಬಾಖವಿ ರವರು ಸನ್ಮಾನಿಸಿ ಗ್ರಾಮ ಪಂಚಾಯತ್ ಹಾಗು ಸಮುದಾಯದ ಸೇವೆಯನ್ನು ಕೊಂಡಾಡಿದರು.
ಜಿ.ಕೆ ಹಮೀದ್ ಗೂನಡ್ಕರವರು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾಗಿ ೫ ಬಾರಿ ಆಯ್ಕೆಯಾಗಿ ಉಪಾಧ್ಯಕ್ಷರಾಗಿ, ಗ್ರಾಮ ಪಂಚಾಯತ್ನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ , ೨ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿರುದಲ್ಲದೆ, ತಮ್ಮ ಅಧಿಕಾರವಸ್ಥೆಯಲ್ಲಿ ಎರಡು ಭಾರಿ ಗಾಂಧಿ ಗ್ರಾಮ ಪುರಸ್ಕಾರ, ಒಂದು ಬಾರಿ ಶಿವರಾಮ ಕಾರಂತ ಪ್ರಶಸ್ತಿಗೆ ಬಾಜನರಾಗಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಅಂತರಾಷ್ಟ್ರೀಯ ಸಂಸ್ಥೆಯಾದ ಲಯನ್ಸ್ ಕ್ಲಭ್ ಸನ್ಮಾನಿಸಿದ್ದಾರೆ. ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಗ್ರಾಮದ ಜನರ ಸಹಬಾಗಿತ್ವದೊಂದಿಗೆ ಬೇಕಾದ ಯೋಜನೆಗಳನ್ನು ರೂಪಿಸಿ ಮೂಲ ಭೂತ ಅವಶ್ಯಕತೆಗಳನ್ನು ಪೂರೈಸಿ ಮಾದರಿ ಗ್ರಾಮ ಪಂಚಾಯತನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿಯ ಸದಸ್ಯರಾಗಿ ವಲಿಯುಲ್ಲಾಯಿ ದರ್ಗಾದ ಉರೂಸ್ ಸಮಿತಿಯ ಕಾರ್ಯದರ್ಶಿಯಾಗಿ ಟಿ.ಎಂ ಶಹೀದ್ ತೆಕ್ಕಿಲ್ ಜೊತೆಯಲ್ಲಿ ಅದ್ಭುತವಾಗಿ ಕೆಲಸ ಮಾಡಿದ್ದರು ಇವರ ಅವಿರತ ಸೇವೆಗಾಗಿ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಪಾಂಡಿ ಅಬ್ಬಾಸ್, ಕಾರ್ಯದರ್ಶಿ ಟಿ ಎಂ ಅಬ್ದುಲ್ ರಾಝಕ್, ತೆಕ್ಕಿಲ್ ಮಹಮದ್ ಕುಂಞಿ ಪೇರಡ್ಕ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಸಾಜೀದ್ ಅಜ್ ಹರಿ ತೆಕ್ಕಿಲ್ ಪೇರಡ್ಕ,ಎಂ ಆರ್ ಡಿ ಎ ಅಧ್ಯಕ್ಷರಾದ ಜಾಕೀರ್ ಹುಸೇನ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಎಸ್ ಕೆ ಹನೀಫ್, ಸ್ಥಳೀಯ ಖತೀಬರಾದ ಬಹು| ರಿಯಾಜ್ ಪೈಝಿ, ಹಂಸ ಉಸ್ತಾದ್, ನೂರುದ್ದಿನ್ ಅನ್ಸಾರಿ,ಮಾಜಿ ಅಧ್ಯಕ್ಷರಾದ ಟಿ ಇ ಆರೀಫ್ ತೆಕ್ಕಿಲ್, ಅಕ್ಬರ್ ಕರಾವಳಿ,ಹಾಜಿ ಅಬ್ದುಲ್ ರಝಕ್, ಖಜಾಂಜಿ ಪಿ ಕೆ ಉಮ್ಮರ್ ಗೂನಡ್ಕ , ಅಬ್ದುಲ್ ಖಾದರ್ ಮೊಟ್ಟೆಂಗಾರ್ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button