ಸುದ್ದಿ

ಸುಳ್ಯ ತಾಲೂಕಿನ ಕಳಂಜದಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಮಸೂದ್ ಮನೆಗೆ ಭೇಟಿ…

ಕುಟುಂಬಕ್ಕೆ ಕೆಪಿಸಿಸಿ ಮುಖಂಡ ಟಿ ಎಂ ಶಾಹೀದ್ ತೆಕ್ಕಿಲ್ ನೇತೃತ್ವದ ನಿಯೋಗ ಸಾಂತ್ವನ...

ಸುಳ್ಯ: ದುಷ್ಕರ್ಮಿಗಳಿಂದ ಮೃತಪಟ್ಟ ಮಸೂದ್ ಅವರ ಕಳಂಜದ ಮನೆಗೆ ಭೇಟಿ ನೀಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಕುಟುಂಬಕ್ಕೆ ಸಂತಾಪ ತಿಳಿಸಿ ಎಲ್ಲ ರೀತಿಯ ಸಹಾಯ ಸಹಕಾರ ಮಾಡುವುದಾಗಿ ಧೈರ್ಯ ತುಂಬಿದರು.
ಎಲ್ಲಾ ಸಮುದಾಯ ಜನರೊಂದಿಗೆ ಸೌಹಾರ್ದತೆ ಕಾಪಾಡುವಂತೆ ಮತ್ತು ದುಷ್ಕರ್ಮಿಗಳಿಗೆ ಯಾರೂ ಸಹಾಯ ಮಾಡದಂತೆ ವಿನಂತಿಸಿ, ಕುಟುಂಬದವರು ಹಾಗೂ ಜಮತಿನ ಹಿರಿಯರ ಒಂದು ಸಮಿತಿಯನ್ನು ಮಾಡಿ ಎಲ್ಲಾ ಕೆಲಸಗಳಿಗೆ ಸಂಪೂರ್ಣ ಸಹಾಯ ಮಾಡುವ ಭರವಸೆ ನೀಡಿದರು. ಸಹೋದರ ಮಿರ್ಶಾದ್ ಮಾವ ಸೌಕತ್ ಭೇಟಿ ಮಾಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಟಿ, ಹನೀಫ್ ಸಂಟ್ಯಾರ್, ಸಿದ್ದೀಕ್ ಕೋಕೋ, ಕಳಂಜ ಜಮಅತ್ ಮಾಜಿ ಅಧ್ಯಕ್ಷರಾದ ಅಝೀಝ್ ಕಳಂಜ, ಅಶ್ರಫ್ ಪೆರ್ಲಂಪಡಿ, ಹೈದರ್ ಮೊದಲಾದವರು ನಿಯೋಗದಲ್ಲಿದ್ದರು.
ರಾತ್ರಿ ಬೆಳ್ಳಾರೆ ಮಸೀದಿಯಲ್ಲಿ ದಫನದ ಸಂದರ್ಭದಲ್ಲೂ ಟಿ ಎಂ ಶಾಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಸಿದ್ದೀಕ್ ಕೋಕೋ ಹಾಜರಿದ್ದು ಇಂದು ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು.

Related Articles

Back to top button