ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಪೇರಡ್ಕ- *ಸಮಸ್ತ ಪ್ರಾರ್ಥನಾ ದಿನ* ಕಾರ್ಯಕ್ರಮ…

ಸುಳ್ಯ: ತೆಕ್ಕಿಲ್ ಮಹಮ್ಮದ್ ಹಾಜಿ ಮೆಮೋರಿಯಲ್ ತಖ್ವೀಯತ್ತುಲ್ ಇಸ್ಲಾಂ ಮದರಸ ಪೇರಡ್ಕದಲ್ಲಿ ಸಮಸ್ತ ಪ್ರಾರ್ಥನಾ ದಿನ ಅಂಗವಾಗಿ ಬಹುಮಾನ್ಯರಾದ ರಿಯಾಝ್ ಫೈಝಿ ಖತೀಬ್ ಪೇರಡ್ಕ ಇವರ ನೇತೃತ್ವ ದಲ್ಲಿ ಶಂಸುಲ್ ಉಲಮಾ ಮೌಲಿದ್, ತಹ್ಲೀಲ್ ಹಾಗೂ ಕೂಟುಪ್ರಾರ್ಥನೆ ಅ. 30 ರಂದು ನಡೆಯಿತು.
ಈ ಸಂದರ್ಭದಲ್ಲಿ ಸಹ ಅಧ್ಯಾಪಕರಾದ ಬಹು: ನೂರುದ್ದೀನ್ ಅನ್ಸಾರಿ ಉಸ್ತಾದ್, ಬಹು: ಹಂಝ ಮುಸ್ಲಿಯಾರ್, ಜಮಾಅತ್ ಕಾರ್ಯದರ್ಶಿ ಟಿ ಎಂ ಅಬ್ದುಲ್ ರಝಾಕ್ ಹಾಜಿ, ಜೊತೆ ಕಾರ್ಯದರ್ಶಿ ಜಿ ಎಂ ಇಬ್ರಾಹಿಂ ಪೇರಡ್ಕ , ಆಡಳಿತ ಕಮಿಟಿಯ ಸದಸ್ಯರುಗಳಾದ ಟಿ ಬಿ ಹನೀಫ ತೆಕ್ಕಿಲ್ , ಡಿ ಎ ಮೊಯಿದು ದರ್ಖಾಸ್ ,ಟಿ ಎ ಮಹಮ್ಮದ್ ಕುಂಞಿ ತೆಕ್ಕಿಲ್ , ಇಬ್ರಾಹಿಂ ನಡುಬೈಲು, ಜಮಾಅತ್ ಸದಸ್ಯರುಗಳಾದ ಟಿ ಬಿ ಅಬ್ದುಲ್ಲ ತೆಕ್ಕಿಲ್, ಕಲ್ನಾಡ್ ಮಹಮ್ಮದ್ ದರ್ಖಾಸ್ , ಪಿ ಎ ಅಶ್ರಫ್ ತೆಕ್ಕಿಲ್, ಪಿ ಕೆ ಅಬ್ದುಲ್ಲ ಪೇರಡ್ಕ, ಸಲೀಂ ಅಲ್ತಾಫ್, ಪಾಂಡಿ ಉಸ್ಮಾನ್, ಶಂಸುದ್ದೀನ್ ದರ್ಖಾಸ್, ಡಿ ಎಂ ಸಲಾಂ ದರ್ಖಾಸ್, ಅಮೀರ್ ದರ್ಖಾಸ್, ಎಸ್ ಎ ಆರಿಫ್ ಶೇಖ್ , ಖಾಜಾ ಪೆರುಂಗೋಡಿ, ಶಾಹಿಲ್ ದರ್ಖಾಸ್ ಹಾಗೂ ಮದರಸ ವಿದ್ಯಾರ್ಥಿಗಳೂ, ವಿದ್ಯಾರ್ಥಿನಿಯರು ಭಾಗವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸೀರಣಿ, ಪಾಯಸ ಮತ್ತು ಸಿಹಿತಿಂಡಿಗಳನ್ನು ಹಂಚಲಾಯಿತು.

Sponsors

Related Articles

Back to top button