ವಿವೇಕಾನಂದ ಎಂಜಿನಿಯರಿ0ಗ್ ಕಾಲೇಜು – ವಾಣಿಜ್ಯೋದ್ಯಮ ಅಭಿವೃದ್ಧಿ ಪ್ರಕೋಷ್ಠ ಹಾಗೂ ಎಂಬಿಎ ವಿಭಾಗದ ಆಶ್ರಯದಲ್ಲಿ ವಿಚಾರ ಸಂಕಿರಣ…

ಪುತ್ತೂರು: ಬಾಳೆಗಿಡದ ಕಾಂಡದಿಂದ ನಾರನ್ನು ತೆಗೆದು ಅದನ್ನು ಸಂಸ್ಕರಿಸಿ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುವ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಮೂಲಕ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಗೆ ವೇದಿಕೆ ನಿರ್ಮಾಣವಾಗಿದೆ ಎಂದು ಕೊಯಮುತ್ತೂರಿನ ಇಕೋಗ್ರೀನ್ ಯುನಿಟ್ ನ ಮುಖ್ಯಸ್ಥ ಎಸ್.ಕೆ.ಬಾಬು ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ0ಗ್ ಎಂಡ್ ಟೆಕ್ನಾಲಜಿಯ ವಾಣಿಜ್ಯೋದ್ಯಮ ಅಭಿವೃದ್ಧಿ ಪ್ರಕೋಷ್ಟ ಹಾಗೂ ಎಂಬಿಎ ವಿಭಾಗದ ಆಶ್ರಯದಲ್ಲಿ ಶ್ರೀರಾಮ ಸಭಾಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಇದಕ್ಕೆ ಬೇಕಾದ ಯಂತ್ರೋಪಕರಣಗಳನ್ನು ತಯಾರಿಸಲಾಗುತ್ತಿದ್ದು ಇದನ್ನು ಮನೆಯಲ್ಲೇ ಸ್ಥಾಪಿಸಿ ಸಣ್ಣ ಉದ್ಯಮವನ್ನಾಗಿಸುವುದಕ್ಕೆ ಸಹಕಾರಿಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಾಲ ಸೌಲಭ್ಯವೂ ಸಿಗುತ್ತದೆ ಎಂದ ಅವರು ಉದ್ಯಮಿಯಾಗುವುದಕ್ಕೆ ಪರಿಶ್ರಮ ಮತ್ತು ತಾಳ್ಮೆ ಅಗತ್ಯ. ಈ ಮನೋಭಾವವು ಉದ್ಯಮದಲ್ಲಿ ಯಶಸ್ಸನ್ನು ತಂದುಕೊಡುತ್ತದೆ ಎಂದರು.
ಪುತ್ತೂರಿನ ಮುಳಿಯ ಜುವೆಲ್ಲರ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಮಾತನಾಡಿ, ಸ್ಟಾರ್ಟ್ಅಪ್ ಉದ್ಯಮಗಳ ಪ್ರಾರಂಭಕ್ಕೆ ಇದು ಸೂಕ್ತವಾಗಿದ್ದು ಎಂಬಿಎ ವಿದ್ಯಾರ್ಥಿಗಳು ಸ್ವಂತ ಉದ್ದಿಮೆಯನ್ನು ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವ ಗುರಿಯನ್ನಿರಿಸಿಕೊಳ್ಳಿ ಎಂದರು.
ಕಾಲೇಜಿನ ವಾಣಿಜ್ಯೋದ್ಯಮ ಅಭಿವೃದ್ಧಿ ಪ್ರಕೋಷ್ಠ ದ ಸಂಯೋಜಕ ಡಾ.ಮನುಜೇಶ್.ಬಿ.ಜೆ ಪ್ರಕೋಷ್ಠದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ, ನರೇಂದ್ರ ಪದವಿಪೂರ್ವ ಕಾಲೇಜಿನ ಸಂಚಾಲಕ ಸಂತೋಷ್, ಹಿಂದೂ ಇಕಾನಮಿಕ್ ಪೋರಂನ ಕಾರ್ಯದರ್ಶಿ ಜಗದೀಶ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂಬಿಎ ವಿಭಾಗದ ಪ್ರೊ.ಆಶ್ಲೆ.ಡಿ.ಸೋಜ ಸ್ವಾಗತಿಸಿ, ಎಂಬಿಎ ವಿಭಾಗದ ವಿದ್ಯಾರ್ಥಿನಿ ಪೊನ್ನಮ್ಮ ವಂದಿಸಿದರು. ಶೀತಲ್ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button