ಕೊಲೆ ಆರೋಪಿ ಮೇಲೆ ಪೊಲೀಸ್ ಫೈರಿಂಗ್ – ಇನ್ಸ್ ಪೆಕ್ಟರ್ ಗೆ ಗಾಯ….

ಬಂಟ್ವಾಳ : ಕೊಲೆ ಆರೋಪಿಯೊಬ್ಬ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚೇಸ್ ಮಾಡಿದ ಪೊಲೀಸರು ಆರೋಪಿ ಮೇಲೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಘಟನೆಯಲ್ಲಿ ಇನ್ಸ್ ಪೆಕ್ಟರ್ ಗೆ ಗಾಯವಾಗಿದೆ.
ಪಿಎಸ್ ಐ ಗಳಾದ ಅವಿನಾಶ್ ಹಾಗೂ ಪ್ರಸನ್ನ ಅವರ ತಂಡ ಖಚಿತ ಮಾಹಿತಿ ಪಡೆದು ಆರೋಪಿ ಖಲೀಲ್ ಇದ್ದ ಕಾರನ್ನು ಗುಂಡ್ಯ ಸಮೀಪದಲ್ಲಿ ಚೇಸ್ ಮಾಡಿದ್ದಾರೆ. ಆರೋಪಿಯ ಕಾರನ್ನು ಪೊಲೀಸರು ಅಡ್ಡಗಟ್ಟಿದಾಗ, ಆತ ಪೊಲೀಸರ ಮೇಲೆ ತಲ್ವಾರ್ ಬೀಸಿದ್ದಾನೆ ಎನ್ನಲಾಗಿದೆ.ಈ ವೇಳೆ ಆರೋಪಿಯ ಕಾಲಿಗೆ ಫೈರಿಂಗ್ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ತಪ್ಪಿಸಿಕೊಂಡಿದ್ದಾ‌ನೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ ಐ ಪ್ರಸನ್ನ ಅವರು ಗಾಯಗೊಂಡಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button