ಬುಧವಾರ – ದ.ಕ 12 , ಉಡುಪಿ 14 ಹಾಗೂ ರಾಜ್ಯದಲ್ಲಿ 397 ಕೊರೊನ ಪ್ರಕರಣ ಪತ್ತೆ…

ಮಂಗಳೂರು : ಇಂದು(ಬುಧವಾರ) ದ.ಕ. ಜಿಲ್ಲೆಯಲ್ಲಿ 12 , ಉಡುಪಿ ಜಿಲ್ಲೆಯಲ್ಲಿ 14 ಹಾಗೂ ರಾಜ್ಯದಲ್ಲಿ 397 ಕೊರೊನ ಪ್ರಕರಣ ಪತ್ತೆಯಾಗಿದೆ.
ದ.ಕ. ಜಿಲ್ಲೆಯಲ್ಲಿ ಇಂದು 12 ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ 7 ಮಂದಿಯನ್ನು ಐ.ಎಲ್.ಎ ಎಂದು ಗುರುತಿಸಲಾಗಿದೆ. ಒಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತಿದ್ದು, 4 ಮಂದಿ ವಿದೇಶದಿಂದ ಹಿಂದಿರುಗಿದವರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಂದು 9 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 122 ಸಕ್ರಿಯ ಪ್ರಕರಣಗಳಿವೆ. ಇನ್ನು ರಾಜ್ಯದಲ್ಲಿ ಇಂದು ಒಟ್ಟು 397 ಕೊರೊನ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು 173 , ಬಳ್ಳಾರಿ 34, ಕಲಬುರಗಿ 22, ರಾಮನಗರ 22, ಯಾದಗಿರಿ 13, ಧಾರವಾಡ 12, ಕೊಪ್ಪಳ 11 ಜಿಲ್ಲೆಗಳಲ್ಲಿ ಕೊರೊನ ಪ್ರಕರಣಗಳು ವರದಿಯಾಗಿವೆ.

Sponsors

Related Articles

Leave a Reply

Your email address will not be published. Required fields are marked *

Back to top button