ಬುಧವಾರ – ದ.ಕ 234 , ಉಡುಪಿ 375 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಬುಧವಾರ) ದ.ಕ ಜಿಲ್ಲೆಯಲ್ಲಿ 234 , ಉಡುಪಿ 375 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 234 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9535 ಕ್ಕೆ ಏರಿಕೆಯಾಗಿದೆ.ಇಂದು 4 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 290 ಕ್ಕೆ ಏರಿಕೆಯಾಗಿದೆ. ಇಂದು 115 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2303 ಸಕ್ರಿಯ ಪ್ರಕರಣಗಳಿವೆ. 234 ಪ್ರಕರಣಗಳ ಪೈಕಿ 148 ಪ್ರಕರಣಗಳು ಮಂಗಳೂರಿನಿಂದ, 29 ಪ್ರಕರಣಗಳು ಬಂಟ್ವಾಳದಿಂದ, 14 ಪ್ರಕರಣಗಳು ಪುತ್ತೂರಿನಿಂದ, 13 ಪ್ರಕರಣಗಳು ಸುಳ್ಯದಿಂದ , ಹಾಗೂ 23 ಪ್ರಕರಣಗಳು ಬೇರೆ ಜಿಲ್ಲೆಯವರದ್ದಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು 375 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9034 ಕ್ಕೆ ಏರಿಕೆಯಾಗಿದೆ. ಇಂದು 1608 ಜನರ ಗಂಟಲ ದ್ರವ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಈ ತನಕ 6132 ಕೊರೋನಾ ಸೊಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಇಂದು 174 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

Sponsors

Related Articles

Leave a Reply

Your email address will not be published. Required fields are marked *

Back to top button