ಶನಿವಾರ – ದ.ಕ 75 ,ಉಡುಪಿ 18 ಹಾಗೂ ರಾಜ್ಯದಲ್ಲಿ 1839 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು(ಶನಿವಾರ) ದ.ಕ ಜಿಲ್ಲೆಯಲ್ಲಿ 75 ,ಉಡುಪಿ ಜಿಲ್ಲೆಯಲ್ಲಿ 18 ಹಾಗೂ ರಾಜ್ಯದಲ್ಲಿ 1839 ಕೊರೊನ ಪಾಸಿಟಿವ್ ಪತ್ತೆಯಾಗಿದೆ.
ದ.ಕ ಜಿಲ್ಲೆಯ ಸೋಂಕಿತರ ಪೈಕಿ 11 ಮಂದಿ ಅಬುಧಾಬಿ, ಮಸ್ಕತ್‌, ದುಬೈನಿಂದ ಆಗಮಿಸಿದವರಾಗಿದ್ದು, 29 ಮಂದಿ ಐಎಲ್‌ಐ ಹಾಗೂ 6 SARI ಪ್ರಕರಣವಾಗಿದೆ. 24 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಬಂದಿದ್ದರೆ, ಒಬ್ಬರಿಗೆ ದ್ವಿತೀಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದೆ.
ರಾಜ್ಯದಲ್ಲಿ ಇಂದು 1839 ಮಂದಿಗೆ ಪಾಸಿಟಿವ್ ಪತ್ತೆಯಾಗಿದ್ದು, 42 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 1172 ಪ್ರಕರಣಗಳು ವರದಿಯಾಗಿವೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ 75, ಬಳ್ಳಾರಿಯಲ್ಲಿ 73, ಬೀದರ್‌ನಲ್ಲಿ 51, ಧಾರವಾಡದಲ್ಲಿ 45, ರಾಯಚೂರಿನಲ್ಲಿ 41, ಮೈಸೂರಿನಲ್ಲಿ 38, ಕಲಬುರಗಿ, ವಿಜಯಪುರದಲ್ಲಿ ತಲಾ 37, ಮಂಡ್ಯ, ಉತ್ತರಕನ್ನಡದಲ್ಲಿ ತಲಾ 35 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 21549ಕ್ಕೆ ಏರಿಕೆಯಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button