ಸುದ್ದಿ

ಬುಧವಾರ – ದ.ಕ 8 , ಉಡುಪಿ 4 ಹಾಗೂ ರಾಜ್ಯದಲ್ಲಿ 204 ಕೊರೊನಾ ಪ್ರಕರಣಗಳು ಪತ್ತೆ…

ಮಂಗಳೂರು : ಇಂದು (ಬುಧವಾರ) ದ.ಕ ಜಿಲ್ಲೆಯಲ್ಲಿ 8 ,ಉಡುಪಿ ಜಿಲ್ಲೆಯಲ್ಲಿ 4 ಹಾಗೂ ರಾಜ್ಯದಲ್ಲಿ 204 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.
ಸದ್ಯ ದ.ಕ. ಜಿಲ್ಲೆಯಲ್ಲಿ 225 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ 4 ಪ್ರಕರಣಗಳಲ್ಲಿ ಮೂವರು ಮಹಾರಾಷ್ಟ್ರದಿಂದ ಮರಳಿದವರಾಗಿದ್ದು, ಓರ್ವನಿಗೆ P-5451ರ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. ಇಂದು 87 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 134 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ರಾಜ್ಯದಲ್ಲಿ ಇಂದು 204 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7734ಕ್ಕೆ ಏರಿಕೆಯಾಗಿದೆ.ಬೆಂಗಳೂರು ನಗರದಲ್ಲಿ 55, ಯಾದಗಿರಿಯಲ್ಲಿ 37, ಬಳ್ಳಾರಿಯಲ್ಲಿ 29, ಕಲಬುರಗಿಯಲ್ಲಿ 19, ಬೀದರ್ ನಲ್ಲಿ 12, ದಕ್ಷಿಣ ಕನ್ನಡ, ಧಾರವಾಡದಲ್ಲಿ 8, ಮಂಡ್ಯದಲ್ಲಿ 7, ಹಾಸನದಲ್ಲಿ 5, ಉಡುಪಿ, ಬಾಗಲಕೋಟೆ, ಶಿವಮೊಗ್ಗದಲ್ಲಿ ತಲಾ 4, ದಾವಣಗೆರೆ, ಚಿಕ್ಕಬಳ್ಳಾಪುರ, ಉತ್ತರಕನ್ನಡದಲ್ಲಿ ತಲಾ 3, ರಾಯಚೂರು, ಮೈಸೂರು, ಬೆಂಗಳೂರು ಗ್ರಾಮಾಂತರದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 9 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.

Related Articles

Leave a Reply

Your email address will not be published.

Back to top button