ದ.ಕ – ಬುಧವಾರ ಒಂದು ಕೊರೊನಾ ಪಾಸಿಟಿವ್‌….

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ ಬುಧವಾರ ಮಧ್ಯಾಹ್ನ 12 ಗಂಟೆವರೆಗೆ ಒಬ್ಬರಿಗೆ ಕೊರೊನಾ ಪಾಸಿಟಿವ್‌ ದೃಢ ಆಗಿದೆ.
ಮಂಗಳೂರಿನ ನೀರುಮಾರ್ಗ ನಿವಾಸಿ 40 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಈ ಮಹಿಳೆ ಕುಡುಪು ಮತ್ತು‌ ಕುಂಟಿಕಾನದಲ್ಲಿನ ಮನೆಯಲ್ಲಿ ಇದ್ದ ಬಗ್ಗೆ ಮಾಹಿತಿ ದೊರೆತಿದೆ. ಮಹಿಳೆಯು ಮೇ.10 ರಂದು ಕಾರಿನಲ್ಲಿ ತನ್ನ ಮಗನೊಂದಿಗೆ ಬೆಂಗಳೂರಿನ ರಾಜಾಜಿನಗರದಿಂದ ಮಂಗಳೂರಿಗೆ ಬಂದಿದ್ದು ಅಸ್ತಮಾ ಮತ್ತು ಬಿಪಿಯಿಂದಾಗಿ ಮೇ.17 ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.

Sponsors

Related Articles

Back to top button