ದ.ಕ – ಬುಧವಾರ ಒಂದು ಕೊರೊನಾ ಪಾಸಿಟಿವ್….
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ ಬುಧವಾರ ಮಧ್ಯಾಹ್ನ 12 ಗಂಟೆವರೆಗೆ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢ ಆಗಿದೆ.
ಮಂಗಳೂರಿನ ನೀರುಮಾರ್ಗ ನಿವಾಸಿ 40 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಈ ಮಹಿಳೆ ಕುಡುಪು ಮತ್ತು ಕುಂಟಿಕಾನದಲ್ಲಿನ ಮನೆಯಲ್ಲಿ ಇದ್ದ ಬಗ್ಗೆ ಮಾಹಿತಿ ದೊರೆತಿದೆ. ಮಹಿಳೆಯು ಮೇ.10 ರಂದು ಕಾರಿನಲ್ಲಿ ತನ್ನ ಮಗನೊಂದಿಗೆ ಬೆಂಗಳೂರಿನ ರಾಜಾಜಿನಗರದಿಂದ ಮಂಗಳೂರಿಗೆ ಬಂದಿದ್ದು ಅಸ್ತಮಾ ಮತ್ತು ಬಿಪಿಯಿಂದಾಗಿ ಮೇ.17 ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.