ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ…
ಬಂಟ್ವಾಳ: ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಕಾಲ ಸಂಘ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಬಂಟ್ವಾಳ ಮತ್ತು ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢ ಶಾಲಾ ಕೊಡಂಗೆ ಇವರಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯ ಕಾರ್ಯಕ್ರಮ ಜೂ. 13 ರಂದು ನಡೆಯಿತು.
ಶ್ರೀಮತಿ ಭಾಗ್ಯಮ್ಮ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಬಂಟ್ವಾಳ ಹಾಗೂ ಅಧ್ಯಕ್ಷರು ತಾಲ್ಲೂಕು ಕಾನೂನು ಸೇವಾ ಸಂಘ ಬಂಟ್ವಾಳ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಅರಿವು ನೀಡಿದರು.
ಜ್ಞಾನೇಶ್ ಎಂಪಿ ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ ಇವರು ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿ ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಚಂದ್ರಶೇಖರ ವೈ ತಳವಾರ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಬಂಟ್ವಾಳ , ಸನ್ಮಾನ್ಯ ಶ್ರೀ ಕೃಷ್ಣಮೂರ್ತಿ ಎನ್ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಬಂಟ್ವಾಳ, ಸಿಬಿ ಗಣೇಶಾನಂದ ಸೋಮಯಾಜಿ ಅಧ್ಯಕ್ಷರು ವಕೀಲರ ಸಂಘ ಬಂಟ್ವಾಳ, ಶ್ರೀಮತಿ ಹರಿಣಿ ಕುಮಾರಿ ಡಿ ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಕಾರ್ಯನಿರ್ವಾಹಕ ಕಾರ್ಯದರ್ಶಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ , ಶ್ರೀ ಸುಧೀರ್ ಜಿ ಮುಖ್ಯೋಪಾಧ್ಯಾಯರು ನೇತಾಜಿ ಸುಭಾಸ್ ಚಂದ್ರ ಬೋಸ್ ಸರಕಾರಿ ಪ್ರೌಢ ಶಾಲೆ ಕೊಡಂಗೆ, ಹಾಗೂ ಶ್ರೀಮತಿ ಮರ್ಲಿನ್ ಡಿಸೋಜಾ ಕಾರ್ಮಿಕ ನಿರೀಕ್ಷಕರು ಕಾರ್ಮಿಕ ಇಲಾಖೆ ಬಂಟ್ವಾಳ ಉಪಸ್ಥಿತರಿದ್ದರು
ಸಂಪನ್ಮೂಲ ವ್ಯಕ್ತಿ ಯಾಗಿ ಶ್ರೀಮತಿ ಶೈಲಜಾ ರಾಜೇಶ್ ವಕೀಲರು ಇವರು ವಿಶ್ವ ಬಾಲ ಕಾರ್ಮಿಕ ದಿನದ ಬಗ್ಗೆ ಕಾನೂನು ಮಾಹಿತಿ ನೀಡಿದರು.
ಸಮಾಜ ವಿಜ್ಞಾನ ಶಿಕ್ಷಕರಾದ ಅಶೋಕ್ ಕುಮಾರ್ ಇವರು ಸ್ವಾಗತಿಸಿದರು ಹಾಗೂ ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಮರ್ಲಿನ್ ಡಿಸೋಜಾ ಇವರು ಧನ್ಯವಾದ ಅರ್ಪಿಸಿದರು ಹಾಗೂ ಹಿಂದಿ ಭಾಷಾ ಶಿಕ್ಷಕರಾದ ದೀಪ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.