ಜುಲೈ 24 ರಿಂದ ರಂಗಮನೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಆರಂಭ…

ಸುಳ್ಯ: ರಂಗಮನೆಯಲ್ಲಿ ಈಗಾಗಲೇ ಹಿಮ್ಮೇಳ ತರಗತಿ ಆರಂಭಗೊಂಡಿದ್ದು ಯಕ್ಷಗಾನದ ನಾಟ್ಯ ತರಗತಿಯು ಜುಲೈ 24 ರಂದು ಆರಂಭವಾಗಲಿದೆ. ಖ್ಯಾತ ಮಹಿಳಾ ಯಕ್ಷಗಾನ ಕಲಾವಿದೆ ಮತ್ತು ಗುರುವಾಗಿರುವ ಶ್ರೀಮತಿ ಸರೋಜಿನಿ ಬನಾರಿ ಯವರು ರಂಗಮನೆಯಲ್ಲಿ ನಾಟ್ಯ ತರಬೇತಿ ನೀಡಲಿದ್ದಾರೆ.
ಪ್ರತಿ ಭಾನುವಾರ ಪೂರ್ವಾಹ್ನ 9.30 ರಿಂದ ಅಪರಾಹ್ನ 12.00 ರ ವರೆಗೆ ನಡೆಯುವ ಯಕ್ಷ ತರಗತಿಯಲ್ಲಿ ಮಕ್ಕಳು,ಯುವಕ ಯುವತಿಯರು,ಮಹಿಳೆಯರು ಸೇರಿದಂತೆ ಆಸಕ್ತರೆಲ್ಲರಿಗೂ ಕಲಿಯಲು ಅವಕಾಶವಿರುತ್ತದೆ. ಈಗಾಗಲೇ ನೋಂದಾವಣಿ ಆರಂಭಗೊಂಡಿದ್ದು ಆಸಕ್ತರು 9441189710 (ಸರೋಜಿನಿ ಬನಾರಿ), 9845505543 ( ಕುಮಾರ ಸುಬ್ರಹ್ಮಣ್ಯ) ಇವರನ್ನು ಸಂಪರ್ಕಿಸಬಹುದೆಂದು ರಂಗಮನೆ ಅಧ್ಯಕ್ಷರಾದ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Sponsors

Related Articles

Back to top button