ಸುದ್ದಿ

ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ವಾರ್ಷಿಕೋತ್ಸವ ಸಮಾರಂಭ…

ಮೂಡುಬಿದ್ರಿ: ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ ಜು. 1 ರಂದು ನಡೆಯಿತು.
ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಇನ್ನೋವೇಶನ್ ಸೆಂಟರ್ ಫಾರ್ ಎಜುಕೇಶನ್ , ಐಬಿಎಂ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮುಂಬೈ ಕಂಪೆನಿಯ ಬ್ಯುಸಿನೆಸ್ ಡೆವೆಲಪ್ ಮೆಂಟ್ ಆಂಡ್ ಅಕಾಡೆಮಿಯ ರಿಲೇಶನ್ ಶಿಪ್ ವಿಭಾಗದ ಲೀಡರ್ ಹರಿ ರಾಮಸುಬ್ರಮಣಿಯನ್ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ಗಳಿಸಿದ ಜ್ಞಾನವನ್ನು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿನಿಯೋಗಿಸಬೇಕು ಎಂದರು.
ಇನ್ನೋರ್ವ ಗೌರವ ಅತಿಥಿಗಳಾಗಿದ್ದ ಇನ್ನೋವೇಶನ್ ಸೆಂಟರ್ ಫಾರ್ ಎಜುಕೇಶನ್ , ಐಬಿಎಂ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಕಂಪೆನಿಯ ಡೆಲಿವರಿ ಅಕೌಂಟ್ ಮ್ಯಾನೇಜ್ ಮೆಂಟ್ ವಿಭಾಗದ ಮುಖ್ಯಸ್ಥ ವಿಕ್ರುದ್ದೀನ್ ಸುರ್ಕಿ ಮಾತನಾಡಿ, ಇಂದಿನ ವೇಗವಾದ ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಗುರಿ, ತ್ಯಾಗ ಮತ್ತು ತ್ವರಿತ ಕಲಿಯುವಿಕೆ ಅತ್ಯಂತ ಅಗತ್ಯವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಅವರು ವಾರ್ಷಿಕ ವರದಿ ವಾಚಿಸಿದರು. ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ವಾಣಿ ಸ್ವಾಗತಿಸಿದರು. ಫೈಝನ್ ಪ್ರಾರ್ಥಿಸಿದರು. ಪ್ರೊ. ಸೀತಾಲಕ್ಷ್ಮಿ ಅತಿಥಿಗಳ ಪರಿಚಯ ಮಾಡಿದರು. ಪ್ರೊ. ನಾಝಿಯಾ ವಂದಿಸಿದರು. ಪ್ರತೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Advertisement

Related Articles

Back to top button