ಸುದ್ದಿ

ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ -ಇಂಜಿನಿಯರ್‌ಗಳ ದಿನಾಚರಣೆ…

ಮೂಡುಬಿದ್ರಿ: ಇಲ್ಲಿನ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಶ್ವವಿಖ್ಯಾತ ಇಂಜಿನಿಯರ್ ಮತ್ತು ಭಾರತ ರತ್ನ ಪುರಸ್ಕೃತರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೆ. 15 ರಂದು 55ನೇ ಇಂಜಿನಿಯರ್‌ಗಳ ದಿನವನ್ನು ಆಚರಿಸಲಾಯಿತು.
ಇಂಜಿನಿಯರ್‌ಗಳ ಮಹಾನ್ ಕೆಲಸ ಮತ್ತು ಅವರ ಕೊಡುಗೆಗಳನ್ನು ಸ್ಮರಿಸಲು, ನೂತನ ಆವಿಷ್ಕಾರ ಹಾಗೂ ನಾವೀನ್ಯತೆಗಾಗಿ ಅವರನ್ನು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ
ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ.ಆರ್.ಜಿ. ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು.
‘ಉತ್ತಮ ಜಗತ್ತಿಗೆ ಸ್ಮಾರ್ಟ್ ಎಂಜಿನಿಯರಿಂಗ್’ ಎಂಬ ವಿಷಯದ ಕುರಿತು ಡಾ.ಆರ್.ಜಿ. ಡಿಸೋಜಾ ಅವರು ಉಪನ್ಯಾಸ ನೀಡಿದರು.
ಎಲ್ಲ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Back to top button