ಮಾನವ ಸರಪಳಿ ಗಾಂಧಿನಗರ ದಲ್ಲಿ ಕೈ ಜೋಡಿಸಿದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮುಖಂಡರು…
ಸುಳ್ಯ: ಸ್ವಾತಂತ್ರ್ಯ,-ಸಮಾನತೆ -ಭಾತೃತ್ವ ದ ಸಂಕೇತವಾಗಿ ಇಂದು ಆಚರಿಸಲ್ಪಟ್ಟ ಅಂತಾರಾಷ್ಟ್ರೀಯ ಸಂವಿದಾನ ದಿನ ದ ಅಂಗವಾಗಿ ಕರ್ನಾಟಕ ಸರ್ಕಾರ ಆಯೋಜಿಸಿರುವ ಮಾನವ ಸರಪಳಿ ಯಲ್ಲಿ ಸುಳ್ಯ ತಾಲೂಕು ಕೇಂದ್ರದ ಗಾಂಧಿನಗರ ಜುಮಾ ಮಸ್ಜಿದ್ ಬಳಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮುಖಂಡರುಗಳು, ಜನಪ್ರತಿನಿಧಿಗಳು, ಶಾಲಾ ವಿದ್ಯಾರ್ಥಿ ಗಳು ಕೈಜೋಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಮುಂದಾಳು ಕೆ. ಎಂ. ಮುಸ್ತಫಾ ಅವರು ಸುಧೀರ್ಘ 75 ವರ್ಷಗಳಿಂದ ದೇಶದ ಪ್ರಜಾಪ್ರಭುತ್ವಕ್ಕೆ ವಿಶ್ವ ಮನ್ನಣೆ ಗಳಿಸಿದ್ದು ಸರ್ವಧರ್ಮ ಸಹೋದರತೆಯಿಂದ ಎಂದರು.
ಸಂವಿಧಾನ ಪೀಠಿಕೆಯನ್ನು ಕೆ. ಎಸ್. ಉಮ್ಮರ್ ವಾಚಿಸಿದರು. ರೋಟರಿ ಶಾಲಾ ವಿದ್ಯಾರ್ಥಿ ಗಳಿಂದ ನಾಡಗೀತೆ ಗಾಯನ ನಡೆಯಿತು.
ಈ ಸಂದರ್ಭದಲ್ಲಿ ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್, ಮುದರ್ರಿಸ್ ಇರ್ಫಾನ್ ಸಖಾಫಿ, ಸದರ್ ಉಸ್ತಾದ್ ಸಿರಾಜುದ್ದೀನ್ ಸಖಾಫಿ, ನಗರ ಪಂಚಾಯತ್ ಸದಸ್ಯರುಗಳಾದ ರಿಯಾಜ್ ಕಟ್ಟೆ ಕ್ಕಾರ್ಸ್, ಸಿದ್ದೇಕ್ ಕೊಕೊ, ಪ್ರಮುಖರುಗಳಾದ ಮಹ ಮ್ಮದ್ ಇಕ್ಬಾಲ್ ಎಲಿಮಲೆ ಹಮೀದ್ ಬೀಜಕೊಚ್ಚಿ, ಕೆ. ಬಿ ಮಜೀದ್, ಹಮೀದ್ ಜನತಾ, ಕೆ. ಬಿ. ಇಬ್ರಾಹಿಂ, ಶಾಫಿ ಕುತ್ತಮೊಟ್ಟೆ, ಎಸ್. ಪಿ. ಅಬೂಬಕ್ಕರ್, ಅಬ್ದುಲ್ ಶುಕೂರ್, ಹಾಜಿ ಎಸ್. ಎ ಅಬ್ದುಲ್ ಹಮೀದ್ ಅಬ್ದುಲ್ ಗಫಾರ್, ಶಾಹಿದ್ ಪಾರೆ,ಮೊದಲಾದವರು ಭಾಗಿಯಾದರು.