ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು – ಉಚಿತ ಆನ್‌ಲೈನ್ ಸಿಇಟಿ ಕ್ರ್ಯಾಶ್ ಕೋರ್ಸ್…

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವತಿಯಿಂದ ಜೂನ್ 14 ರಿಂದ ಸಿಇಟಿ ಆಕಾಂಕ್ಷಿಗಳಿಗಾಗಿ ಉಚಿತ ಆನ್‌ಲೈನ್ ಕ್ರ್ಯಾಶ್ ಕೋರ್ಸ್ ನ್ನು ಆಯೋಜಿಸಲಾಗುತ್ತಿದೆ.
ಕೋರ್ಸ್ ಒಟ್ಟು 120 ಗಂಟೆಗಳ ಅವಧಿಯನ್ನು ಹೊಂದಿರುತ್ತದೆ. ಕ್ರ್ಯಾಶ್ ಕೋರ್ಸ್ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದ ಪರಿಕಲ್ಪನೆಗಳನ್ನು ಈ ಕ್ರ್ಯಾಶ್ ಕೋರ್ಸ್ ಒಳಗೊಂಡಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಈ ಕೋರ್ಸ್ ನ್ನು ಅನುಭವಿ ಮತ್ತು ಅರ್ಹ ಅಧ್ಯಾಪಕರು ನಡೆಸಲಿದ್ದಾರೆ. ಕೋರ್ಸ್ ಸಮಯದಲ್ಲಿ ನಿಯಮಿತ ಅಣಕು ಪರೀಕ್ಷೆಗಳೂ ಇರುತ್ತವೆ.
ಸಾಂಕ್ರಾಮಿಕ ರೋಗದಿಂದಾಗಿ ಅನೇಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಮತ್ತು ಸಿಇಟಿ ಪರೀಕ್ಷೆಗಳಿಗೆ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದು ವಿದ್ಯಾರ್ಥಿಗಳಲ್ಲಿ ಒತ್ತಡ ಮತ್ತು ಅನಿಶ್ಚಿತತೆಯ ಭಾವವನ್ನು ಮೂಡಿಸುವ ಸಾಧ್ಯತೆಯಿದೆ. ಹಾಗಾಗಿ ಅನುಭವಿ ಅಧ್ಯಾಪಕರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಸಿಇಟಿ ಪರೀಕ್ಷೆಗಳಿಗೆ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ಸಹ್ಯಾದ್ರಿ ಕಾಲೇಜು ಈ ಈ ಕ್ರ್ಯಾಶ್ ಕೋರ್ಸ್ ನ್ನು ಆಯೋಜಿಸಿದೆ ಎಂದು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲ ಡಾ.ರಾಜೇಶ ಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಉಚಿತ ಆನ್‌ಲೈನ್ ಸಿಇಟಿ ಕ್ರ್ಯಾಶ್ ಕೋರ್ಸ್‌ಗೆ ನೋಂದಾಯಿಸಲು http://bit.ly/sahcetcc ಕ್ಲಿಕ್ ಮಾಡಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ 9448100000 ಸಂಪರ್ಕಿಸಬಹುದು.

Sponsors

Related Articles

Back to top button