ಸುಳ್ಯ ರೋಟರಿ ಕ್ಲಬ್ ಗೆ 30 ಪ್ರಶಸ್ತಿಗಳು…
ಸುಳ್ಯ: ರೋಟರಿ ಕ್ಲಬ್ ಸುಳ್ಯವು ಪ್ರಸಕ್ತ ಸಾಲಿನಲ್ಲಿ ಒಟ್ಟು 30 ಪ್ರಶಸ್ತಿಗಳನ್ನು ಪಡೆದು ರೋಟರಿ ಜಿಲ್ಲೆ 3181ನ 85 ಕ್ಲಬ್‌ಗಳಲ್ಲಿ ಮಹೋನ್ನತ ಸೇವೆ ಸಲ್ಲಿಸಿದಕ್ಕಾಗಿ ರೋಟರಿ ಜಿಲ್ಲೆಯಲ್ಲಿಯೇ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಜೂ.18ರಂದು ಬಂಟ್ವಾಳದ ಲೊರೆಟ್ಟೋ ಹಿಲ್ಸ್ ಕ್ಲಬ್ಬಿನಲ್ಲಿ ಸರಳವಾಗಿ ನಡೆಯಿತು. ಪ್ರಶಸ್ತಿಗಳನ್ನು ಜಿಲ್ಲಾ ಗವರ್ನರ್ ಜೋಸೆಫ್ ಮಾಥ್ಯೂ ರವರಿಂದ ಕ್ಲಬ್‌ನ ಅಧ್ಯಕ್ಷರಾದ ಡಾ. ಪುರುಷೋತ್ತಮ ಕಟ್ಟೆಮನೆಯವರು ಪಡೆದುಕೊಂಡರು. ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ನೆಲೆಯಲ್ಲಿ ಡಾ. ಕೇಶವ್ ಪಿ.ಕೆ. ಹಾಗೂ ಖಜಾಂಜಿ ಸತೀಶ್ ಕೆ.ಜಿ. ಯವರು ಉಪಸ್ಥಿತರಿದ್ದರು.
ವಿವರಗಳು: ರೋಟರಿ ಮಾಹಿತಿ, ಸಾರ್ವಜನಿಕ ಸಂಪರ್ಕ, ಕ್ಲಬ್ ಬುಲೆಟಿನ್, ಹಣಕಾಸು ನಿರ್ವಹಣೆ, ಸಂಘ ಸೇವೆ ಕಾರ್ಯಕ್ರಮ ಆಯೋಜನೆಯಲ್ಲಿ ಪ್ರಥಮ ಸ್ಥಾನ, ರೋಟರಿ ದ್ಯೇಯ ವೃತ್ತಿಪರ ಸೇವಾ ಪ್ರಶಸ್ತಿ ಪ್ರಧಾನ, ಗ್ರಾಹಕರ ಹರಿವು ಹಾಗೂ ಮಾಹಿತಿ ಹಕ್ಕು ಕಾರ್ಯಕ್ರಮ, ವೃತ್ತಿಪರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ, ಪರಿಸರ ಹಾಗೂ ಮಳೆಕೊಯ್ಲು ಮಾಹಿತಿ, ಶಾಂತಿ ಪ್ರಚಾರ, ಸ್ಥಳೀಯ ಆರ್ಥಿಕತೆಗೆ ಉತ್ತೇಜನ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಸಂಘಕ್ಕೆ ಸದಸ್ಯರ ಸೇರ್ಪಡೆ, ರೋಟರಿ ಕುಟುಂಬ ಮತ್ತು ಪಾಲುಗಾರಿಕಾ ಸೇವೆ, ರೋಗದ ವಿರುದ್ಧ ಜಾಗೃತಿ ಹಾಗೂ ಹೋರಾಟ, ಶಿಕ್ಷಣಕ್ಕೆ ಬೆಂಬಲ, ಅಂತರ್‌ರಾಷ್ಟ್ರೀಯ ಮಟ್ಟದ ಗೆಳೆತನ ವಿನಿಮಯ ಮತ್ತು ಯುವಜನ ಸೇವೆ ಕಾರ್ಯಕ್ರಮಗಳಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಸದಸ್ಯರ ಹಾಜರಾತಿ, ವೃತ್ತಿಪರ ಕಾರ್ಯಕ್ರಮ ಆಯೋಜನೆ, ಉತ್ತಮ ಸಮುದಾಯ ಸೇವೆ, ಅಂತರರಾಷ್ಟ್ರೀಯ ಯೋಜನೆಯಡಿಯಲ್ಲಿ ಜಿಲ್ಲಾ ಅನುದಾನ, ಅಂತರ್‌ರಾಷ್ಟ್ರೀಯ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಯಲ್ಲಿ ತೃತೀಯ ಸ್ಥಾನ ಪಡೆದಿದೆ. ಕೋವಿಡ್ 19 ಇದರ ಅಂಗವಾಗಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದಕ್ಕಾಗಿ ಜಿಲ್ಲಾ ಪ್ರಶಂಸನಾ ಪತ್ರ ಲಭಿಸಿದೆ. ಇದಲ್ಲದೆ ಸಂಘ ಸೇವೆ, ವೃತ್ತಿಪರ ಸೇವೆ ಮತ್ತು ಸಮುದಾಯ ಸೇವೆಯಲ್ಲಿ ಅತ್ಯುತ್ತಮ ಕ್ಲಬ್‌ನಡಿಯಲ್ಲಿ ಪ್ರಥಮ ಸ್ಥಾನ ಯುವಜನ ಸೇವೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.