ಸಿದ್ದರಾಮಯ್ಯನವರಿಗೆ ಮೊಟ್ಟೆ ಎಸೆತ ಘಟನೆ – ಕಾಂಗ್ರೆಸ್ ನಾಯಕ ಟಿ ಎಂ ಶಾಹೀದ್ ತೆಕ್ಕಿಲ್ ಖಂಡನೆ…

ಸುಳ್ಯ: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮದೆನಾಡು – ಕೊಯಿನಾಡು ಕಿಂಡಿ ಅಣೆಕಟ್ಟಿನ ಸ್ಥಳ, ಮಡಿಕೇರಿಯ ಡಿಸಿ ಕಚೇರಿ ಎದುರು ತಡೆಗೋಡೆ ವೀಕ್ಷಣೆ, ಕುಶಾಲನಗರ ಹಾಗೂ ಕೊಡ್ಲಿಪೇಟೆ ಸೋಮವಾ ಪೇಟೆ ಮೊದಲಾದ ಕಡೆಗೆ ಹೋಗುವ ಸಂದರ್ಭದಲ್ಲಿ ಅವರನ್ನು ಬಿಜೆಪಿ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲಿ ಮೊಟ್ಟೆ ಎಸೆದು, ಕಪ್ಪು ಬಾವುಟ ಪ್ರದರ್ಶಿಸಿದ್ದು ಖಂಡನೀಯ. ನೆರೆ, ಜಲ ಪ್ರಳಯ ಹಾಗೂ ಭೂಕಂಪ ಸಂದರ್ಭದಲ್ಲಿ ನಯಾ ಪೈಸೆಯ ಸಹಾಯ ಮಾಡದ ಮೊಂಡುವಾದದ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಸರಕಾರ ರಾಜೀನಾಮೆ ನೀಡಿ ಚುನಾವಣೆ ಘೋಷಿಸುವಂತೆ ಮತ್ತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಕ್ಷಮೆ ಕೇಳಲು ವಿರಾಜಪೇಟೆ ಉಸ್ತುವಾರಿ, ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ.
ಮುಂದಿನ ದಿನದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರನ್ನು ರಾಜ್ಯದಲ್ಲೂ ಸಂಚರಿಸಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಡ್ಡಿಪಡಿಸಿದಲ್ಲಿ ಕಾನೂನು ಸುವ್ಯವಸ್ಥೆ ಗಂಭೀರವಾಗಿ ಕುಸಿಯುವ ಅಪಾಯ ಇದೆ, ಇದಕ್ಕೆ ಸರಕಾರವೇ ಸಂಪೂರ್ಣ ಹೊಣೆ ಎಂದು ಸರಕಾರವನ್ನು ಟಿ ಎಂ ಶಾಹೀದ್ ತೆಕ್ಕಿಲ್ ಎಚ್ಚರಿಸಿದ್ದಾರೆ.

Sponsors

Related Articles

Back to top button