ಶುಕ್ರವಾರ – ದ.ಕ 428 , ಉಡುಪಿ 186 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಶುಕ್ರವಾರ ) ದ.ಕ ಜಿಲ್ಲೆಯಲ್ಲಿ 428 , ಉಡುಪಿ 186 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 428 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14223 ಕ್ಕೆ ಏರಿಕೆಯಾಗಿದೆ.ಇಂದು 7 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 391 ಕ್ಕೆ ಏರಿಕೆಯಾಗಿದೆ. ಇಂದು 222 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2904 ಸಕ್ರಿಯ ಪ್ರಕರಣಗಳಿವೆ. 428 ಪ್ರಕರಣಗಳ ಪೈಕಿ 222 ಪ್ರಕರಣಗಳು ಮಂಗಳೂರಿನಿಂದ, 61 ಪ್ರಕರಣಗಳು ಬಂಟ್ವಾಳದಿಂದ, 54 ಪ್ರಕರಣಗಳು ಪುತ್ತೂರಿನಿಂದ, 45 ಪ್ರಕರಣಗಳು ಸುಳ್ಯದಿಂದ , 28 ಪ್ರಕರಣಗಳು ಬೆಳ್ತಂಗಡಿಯಿಂದ ಹಾಗೂ 18 ಪ್ರಕರಣಗಳು ಬೇರೆ ಜಿಲ್ಲೆಯವರದ್ದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು 186 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 12336ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1967 ಸಕ್ರಿಯ ಪ್ರಕರಣಗಳಿವೆ.

Sponsors

Related Articles

Leave a Reply

Your email address will not be published. Required fields are marked *

Back to top button