ಕಾಂಗ್ರೇಸ್ ಮುಕ್ತ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಮಾಡಲು ಶಾಸಕ ರಾಜೇಶ್ ನಾಯ್ಕ್ ಕರೆ….

ಬಂಟ್ವಾಳ: ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಚೆನ್ನೈತ್ತೋಡಿ ಗ್ರಾಮ ಪಂಚಾಯತ್‍ನಲ್ಲಿ ಪಿಲಿಮೊಗರು, ಅಜ್ಜಿಬೆಟ್ಟು,ಕೊಡಂಬೆಟ್ಟು ಗ್ರಾಮದ ಪ್ರತಿಯೊಬ್ಬ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿ ಗ್ರಾಮ ಪಂಚಾಯತ್‍ನ 20 ಜನ ಸದಸ್ಯರನ್ನು ಗೆಲ್ಲಿಸಿ ಕೊಡುವ ಮೂಲಕ ಚೆನ್ನೈತ್ತೋಡಿ ಗ್ರಾಮ ಪಂಚಾಯತ್‍ನ್ನು ಕಾಂಗ್ರೇಸ್ ಮುಕ್ತಗೊಳಿಸಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಕರೆ ಕೊಟ್ಟರು.
ಅವರು ವಾಮದಪದವು ಗಣೇಶ ಮಂದಿರದಲ್ಲಿ ಜರಗಿದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಕ್ಷೇತ್ರದ ಅಧ್ಯಕ್ಷರಾದ ದೇವಪ್ಪ ಪೂಜಾರಿ, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಮತ್ತು ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ, ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸದಸ್ಯೆ ಸುಲೋಚನ ಜಿ.ಕೆ ಭಟ್, ಬೂಡದ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಕ್ಷೇತ್ರದ ಪ್ರ.ಕಾರ್ಯದರ್ಶಿಯಾದ ಡೊಂಬಯ ಅರಳ, ರವೀಶ್ ಶೆಟ್ಟಿ, ಕಾರ್ಯದರ್ಶಿಗಳಾದ ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಗಣೇಶ್ ರೈ, ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷರಾದ ವಿಜಯ ರೈ, ಪ್ರಮುಖರಾದ ಗೋಪಾಲ ಕೃಷ್ಣ ಚೌಟ, ಜಯರಾಮ ಶೆಟ್ಟಿ, ಮೋಹನದಾಸ ಗಟ್ಟಿ, ಚಂದ್ರಶೇಖರ ಶೆಟ್ಟಿ, ದಿನೇಶ್ ಶೆಟ್ಟಿ, ನಾಗರಾಜ ಶೆಟ್ಟಿ, ದಿವಾಕರ ಪೂಜಾರಿ, ಜಯರಾಮ ಪೂಜಾರಿ, ವೆಂಕಟೇಶ್ ಭಟ್, ಪ್ರಣಾಪ್ ಶೆಟ್ಟಿ, ಗಂಗಾಧರ ಪೂಜಾರಿ, ನಾರಾಯಣ ಪೂಜಾರಿ, ಯಸಶ್ ರೈ, ಸುಭಾಷ್‍ಚಂದ್ರ, ಬೋಜರಾಜ ಶೆಟ್ಟಿ, ಸುಧೀರ್ ಶೆಟ್ಟಿ, ವಿನುತ, ಕಮಲ್ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

IMG 20201108 WA0030 300x200 IMG 20201108 WA0029 300x200

Related Articles

Leave a Reply

Your email address will not be published. Required fields are marked *