ಅಡುಗೆ
-
Sep- 2020 -3 September
ಈರುಳ್ಳಿ ಬಜ್ಜಿ…..
ಈರುಳ್ಳಿ ಬಜ್ಜಿ ತಯಾರಿಸುವ ವಿಧಾನ: ಈರುಳ್ಳಿಯನ್ನು ಉದ್ದನೆಯ ತೆಳುವಾದ ಹೋಳುಗಳಾಗಿ ಕತ್ತರಿಸಬೇಕು. ನಂತರ ಅದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು, ಸ್ವಲ್ಪ ಮೆಣಸಿನ ಹುಡಿ, ಸ್ವಲ್ಪ ಅರಶಿನ ಹುಡಿ, ಒಂದು ಚಿಟಿಕೆ ಇಂಗು, ಸ್ವಲ್ಪ ಜೀರಿಗೆ ಹುಡಿ, ಸ್ವಲ್ಪ ಓಂ ಕಾಳು ಬೆರೆಸಬೇಕು. ಮೊದಲು ನೀರನ್ನು ಸೇರಿಸದೆ ಒಂದು ಪಾತ್ರೆಯಲ್ಲಿ ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ನಂತರ ಕಡ್ಲೆ ಹುಡಿಯೊಂದಿಗೆ ಈ ಮಿಶ್ರಣವನ್ನು ಗಟ್ಟಿಯಾಗಿ ಬೆರೆಸಬೇಕು. ಅಗತ್ಯವಿದ್ದರೆ ಮಾತ್ರ ಸ್ವಲ್ಪ ನೀರು ಬಳಸಿರಿ. ನಂತರ ಮಧ್ಯಮ ಶಾಖದಲ್ಲಿ ಎಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ, ಕಡ್ಲೆ ಹುಡಿಯೊಂದಿಗೆ ಈಗಾಗಲೇ ತಯಾರಿಸಿದ ಮಿಶ್ರಣವನ್ನು ಉಂಡೆಯಾಗಿ ಹಾಕಿ, ಸರಿಯಾದ ಉರಿಯಲ್ಲಿ ಹೊಂಬಣ್ಣ/ಕಂದು ಬಣ್ಣ ಬರುವವರೆಗೂ ಕಾಯಿಸಿ. ಬರಹ: ಶ್ರೀಮತಿ ರಶ್ಮಿ ಪಿ.ಸಿ
Read More » -
Jul- 2020 -9 July
ಖರ್ಜೂರದ ಲಾಡು…
ಖರ್ಜೂರದ ಲಾಡು ತಯಾರಿಸುವ ವಿಧಾನ: ಬಾಣಲೆಗೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಹಾಕಿ ಹದವಾದ ಉರಿಯಲ್ಲಿ ಕಾಯಿಸಿ. ಅದಕ್ಕೆ ಬೀಜ ತೆಗೆದ ಖರ್ಜೂರ ಮತ್ತು ಬೆಲ್ಲವನ್ನು ಹಾಕಿ ಚೆನ್ನಾಗಿ ಬೆರೆಸುತ್ತಾ ಇರಿ. ಬೆಲ್ಲವೆಲ್ಲಾ ಕರಗಿ , ಖರ್ಜೂರವೂ ಮೆತ್ತಗಾಗುತ್ತದೆ. ಈ ಪಾಕ ಉಂಡೆ ಮಾಡುವ ಹದಕ್ಕೆ ಬಂದಾಗ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಪಾಕ ತುಂಬಾ ಗಟ್ಟಿಯಾಗುವ ಮೊದಲೇ ಬಾಣಲೆಯನ್ನು ಒಲೆಯಿಂದ ಕೆಳಗಿಳಿಸಿ. ಪೂರ್ತಿ ತಣ್ಣಗಾಗುವ ಮೊದಲೇ ಬೇಕಾದಷ್ಟು ದೊಡ್ಡದಾದ ಉಂಡೆ ಕಟ್ಟಿದರೆ ಖರ್ಜೂರದ ಲಾಡು ರೆಡಿ. ಬರಹ: ಶ್ರೀಮತಿ ರಶ್ಮಿ ಪಿ.ಸಿ
Read More »