ಖರ್ಜೂರದ ಲಾಡು…

ಖರ್ಜೂರದ ಲಾಡು ತಯಾರಿಸುವ ವಿಧಾನ:

ಬಾಣಲೆಗೆ ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಹಾಕಿ ಹದವಾದ ಉರಿಯಲ್ಲಿ ಕಾಯಿಸಿ. ಅದಕ್ಕೆ ಬೀಜ ತೆಗೆದ ಖರ್ಜೂರ ಮತ್ತು ಬೆಲ್ಲವನ್ನು ಹಾಕಿ ಚೆನ್ನಾಗಿ ಬೆರೆಸುತ್ತಾ ಇರಿ. ಬೆಲ್ಲವೆಲ್ಲಾ ಕರಗಿ , ಖರ್ಜೂರವೂ ಮೆತ್ತಗಾಗುತ್ತದೆ. ಈ ಪಾಕ ಉಂಡೆ ಮಾಡುವ ಹದಕ್ಕೆ ಬಂದಾಗ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಪಾಕ ತುಂಬಾ ಗಟ್ಟಿಯಾಗುವ ಮೊದಲೇ ಬಾಣಲೆಯನ್ನು ಒಲೆಯಿಂದ ಕೆಳಗಿಳಿಸಿ. ಪೂರ್ತಿ ತಣ್ಣಗಾಗುವ ಮೊದಲೇ ಬೇಕಾದಷ್ಟು ದೊಡ್ಡದಾದ ಉಂಡೆ ಕಟ್ಟಿದರೆ ಖರ್ಜೂರದ ಲಾಡು ರೆಡಿ. ಬರಹ: ಶ್ರೀಮತಿ ರಶ್ಮಿ ಪಿ.ಸಿ

Khjur Laadu 500x500 1 300x300 Images DSC 0367 300x199

Leave a Reply

Your email address will not be published. Required fields are marked *