ಸರ್ಕಾರಿ ಪ್ರೌಢಶಾಲೆ ಕೊಕ್ರಾಡಿ – ಪ್ರತಿಭಾ ಪುರಸ್ಕಾರ…
ಬೆಳ್ತಂಗಡಿ: ಸರ್ಕಾರಿ ಪ್ರೌಢಶಾಲೆ ಕೊಕ್ರಾಡಿ ಬೆಳ್ತಂಗಡಿ.ದ.ಕ ಇದರ ಪ್ರತಿಭಾ ಪುರಸ್ಕಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ನಿತಿನ್ ಅಂಡಿಂಜೆ ವಹಿಸಿದ್ದರು.
ಕೊಕ್ರಾಡಿ ಹೈಸ್ಕೂಲ್ ಬೆಟರ್ ಮೆಂಟ್ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಶ್ರೀ ದೇವೇಂದ್ರ ಹೆಗ್ಡೆ ಕೊಕ್ರಾಡಿ ಇವರು ಸರ್ಕಾರಿ ಸಂಸ್ಥೆಯನ್ನು ಅತ್ಯುತ್ತಮ ಗುಣಮಟ್ಟದ ,ಆಕಷ೯ಕವಾಗಿ ರೂಪಿಸುವ ಟ್ರಸ್ಟ್ ಆಶಯದಂತೆ ಮುಂದಿನ ವರ್ಷ ಪ್ರೌಢಶಾಲೆ ಬೆಳ್ಳಿ ಹಬ್ಬದ ಸವಿನೆನಪಿನಲ್ಲಿ ಮಾನ್ಯ ಶಾಸಕರ ನೇತೃತ್ವದಲ್ಲಿ ಸರಕಾರ ಮತ್ತು ದಾನಿಗಳ ಸಹಕಾರದೊಂದಿಗೆ ಎರಡು ಕೋಟಿ ವೆಚ್ಚದ 12 ಕೊಠಡಿಗಳ ಉದ್ಘಾಟನೆ ಮತ್ತು ಬೆಳ್ಳಿ ಹಬ್ಬ ಆಚರಣೆ ಇವುಗಳನ್ನು ಮಾಡಲು ನಿರ್ಧರಿಸಲಾಗಿದ್ದು ಎಲ್ಲಾ ಹಳೆವಿದ್ಯಾರ್ಥಿಗಳು, ಪೋಷಕರು , ಊರವರು ಕೈಜೋಡಿಸುವಂತೆ ವಿನಂತಿಸಿದರು.
ಬೆಳಗಿನ ಸಭಾ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಕ್ರೀಡೆಗಳಲ್ಲಿ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. 2022-23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿಗಳ ಮತ್ತು ವಿದ್ಯಾಭಿಮಾನಿಗಳ ಪ್ರೋತ್ಸಾಹ ಧನ ವಿತರಿಸಲಾಯಿತು.
2022-23 ನೇ ಸಾಲಿನಲ್ಲಿ 100% ಫಲಿತಾಂಶ ಪಡೆದು ಶಾಲೆಗೆ ಹೆಮ್ಮೆ ತಂದ ಎಲ್ಲಾ 64 ವಿದ್ಯಾರ್ಥಿಗಳಿಗೆ ಶಾಲು, ಹೂ ಮತ್ತು ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ಮಧ್ಯಾಹ್ನ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲರವಕ್ಕೆ ವೇದಿಕೆ ಸಾಕ್ಷಿಯಾಯಿತು. ವಿದ್ಯಾರ್ಥಿಗಳು ವಿವಿಧ ಬಗೆಯ ಕಲಾಪ್ರತಿಭೆಯನ್ನು ತೋರ್ಪಡಿಸಿದರು.
ಸಭಾವೇದಿಕೆಯಲ್ಲಿ ಅಂಡಿಂಜೆ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ, ಸದಸ್ಯರಾದ ಶ್ರೀಮತಿ ಜಯಂತಿ, ಶ್ರೀಮತಿ ಶೋಭಾ, ಶ್ರೀಮತಿ ಸುಜಾತ, ಕೊಕ್ರಾಡಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಾರ್ಬರ್ಟ್ ಮಾರ್ಟಿಸ್ , ಶ್ರೀರಾಮ ಶಾಲೆ ಸುಲ್ಕೇರಿಯ ಸಂಚಾಲಕರಾದ ಶ್ರೀ ರಾಜು ಪೂಜಾರಿ ಸಾವ್ಯ, ಮುಖ್ಯ ಶಿಕ್ಷಕರಾದ ಶ್ರೀ ಗುರುಮೂರ್ತಿ, ಟ್ರಸ್ಟ್ ಕಾರ್ಯದರ್ಶಿ ಶ್ರೀ ಮಣಿಕಂಠ ಪ್ರಸಾದ್ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶ್ರೀ ಮೋಹನ್ ಅಂಡಿಂಜೆ, ಟ್ರಸ್ಟ್ ಸದಸ್ಯರಾದ ಶ್ರೀ ರತ್ನಾಕರ ಹೆಗ್ಡೆ, ಶ್ರೀ ಉಮಾ ಕಾಂತ ಆರಿಗ,ಶ್ರೀ ಲಕ್ಷ್ಮಣ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಜಗದೀಶ್ ಹೆಗ್ಡೆ, ಹಳೆವಿದ್ಯಾರ್ಥಿ ಶ್ರೀ ರಾಜಶೇಖರ್, ಅಧ್ಯಾಪಕರಾದ ಶ್ರೀ ಜಯರಾಮ ಮಯ್ಯ, ಎಸ್‌ಡಿಎಮ್‌ಸಿ ಸದಸ್ಯರು, ಶಾಲಾ ವಿದ್ಯಾರ್ಥಿಗಳ ಎಲ್ಲಾ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ಎಚ್.ಎಸ್. ಶ್ರೀಕೃಷ್ಣ ವರದಿ ಮಂಡಿಸಿ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕರಾದ ಶ್ರೀಮತಿ ಅಕ್ಕಮ್ಮ ಅವರು ವಂದನೆಗೈದರು. ಸಮಾಜ ವಿಜ್ಞಾನ ಅಧ್ಯಾಪಕರಾದ ಶ್ರೀ ಮಹಮ್ಮದ್ ರಿಯಾಜ್ ರವರು ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ನಂತರದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲಾ ವಿದ್ಯಾರ್ಥಿಗಳೇ ನಿರೂಪಿಸಿದರು.