ಕೋಮು ಭಾವನೆ ಕೆರಳಿಸುವ ಬ್ಯಾನರ್ ಗಳ ತೆರವಿಗೆ ಮನವಿ…

ಸುಳ್ಯ: ನಗರದಲ್ಲಿ ಕೋಮು ಭಾವನೆ ಕೆರಳಿಸುವ ಬ್ಯಾನರ್ ಗಳ ತೆರವಿಗೆ ತಾಲ್ಲೂಕು ದಂಡಾಧಿಕಾರಿ ಯಾದ ತಹಶೀಲ್ದಾರ್ ಡಾಕ್ಟರ್ ಅನಿತಾಲಕ್ಷ್ಮಿ ಯವರಿಗೆ ಮುಸ್ಲಿ ಒಕ್ಕೂಟದ ವತಿಯಿಂದ ಮನವಿ ನೀಡಿ ಸೂಕ್ತಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು.
ನಿಯೋಗದಲ್ಲಿ ಶಾಫಿ ಎಂ ಆರ್,ಮಸೂದ್ ಕೆ ಎಂ ಗಾಂಧಿನಗರ, ಜಾಫರ್ ಬೋರುಗುಡ್ಡೆ,ರಿಜ್ವಾನ್ ನಾವೂರ್,ಟಿ ಎಂ ಶಾಹಿದ್ ತೆಕ್ಕಿಲ್ ಉಪಸ್ಥಿತರಿದ್ದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.