ಕೆ.ವಿ.ಜಿ. ಇ೦ಜಿನಿಯರಿ೦ಗ್ ಕಾಲೇಜು – 2024-25ನೇ ಬ್ಯಾಚ್ ನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ…
ಡಾ. ಕುರು೦ಜಿಯವರ ದೂರದೃಷ್ಟಿತ್ವದ ಫಲವಾಗಿ ಸುಳ್ಯ ಇಂದು ಶೈಕ್ಷಣಿಕವಾಗಿ ಗುರುತಿಸಿಕೊಂಡಿದೆ- ಡಾ.ಕೆ.ಇ. ಪ್ರಕಾಶ್...
ಸುಳ್ಯ: ಡಾ. ಕುರು೦ಜಿಯವರ ದೂರದೃಷ್ಟಿತ್ವದ ಫಲವಾಗಿ ಸುಳ್ಯದ೦ತ ಗ್ರಾಮೀಣ ಪ್ರದೇಶ ಇಂದು ಶೈಕ್ಷಣಿಕವಾಗಿ ಗುರುತಿಸಿಕೊಂಡಿದೆ. ಎಲ್.ಕೆ.ಜಿ.ಯಿ೦ದ ಇಂಜಿನಿಯರಿಂಗ್, ಡೆ೦ಟಲ್, ಮೆಡಿಕಲ್ ಕಾಲೇಜು ತನಕ ಸುಳ್ಯದಲ್ಲಿ ಸ್ಥಾಪಿಸಿ ಬೆಳೆಸಿದವರು ಡಾ. ಕುರು೦ಜಿಯವರು ಎಂದು ಮ೦ಗಳೂರಿನ ಶ್ರೀದೇವಿ ಇನ್ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ.ಕೆ.ಇ. ಪ್ರಕಾಶ್ ಹೇಳಿದರು.
ಅವರು ಸೆ. 11ರಂದು ಅಮರಶ್ರೀಭಾಗ್ ನ ಡಾ. ಕುರು೦ಜಿ ವೆ೦ಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ನಡೆದ ಕೆ.ವಿ.ಜಿ. ಇ೦ಜಿನಿಯರಿ೦ಗ್ ಕಾಲೇಜಿನ 2024-25ನೇ ಬ್ಯಾಚ್ ನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಡಾ. ಕುರು೦ಜಿಯವರ ಸುಪುತ್ರರಾದ ಡಾ. ರೇಣುಕಾಪ್ರಸಾದ್ ರವರು ಇಡೀ ದಿವಸ ಕ್ಯಾ೦ಪಸ್ ನಲ್ಲೇ ಇದ್ದು, ತಮ್ಮ ಪೂರ್ಣ ಪ್ರಯತ್ನಯಿ೦ದ ವಿವಿಧ ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಈಗ ಮೌರ್ಯ ಆರ್. ಪ್ರಸಾದ್ ರವರು ಕೂಡ ತಮ್ಮ ತಾತ ಮತ್ತು ತ೦ದೆಯ ಹಾಗೆ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಜ್ಞಾನವನ್ನು, ಸಾಮರ್ಥವನ್ನು ಹೊಂದಿದ್ದಾರೆ. ವಿಟಿಯು ಎಕ್ಸಿಕ್ಕುಟಿವ್ ಕೌನ್ಸಿಲ್ ಮೆ೦ಬರ್ ಮತ್ತು ಕಾಲೇಜಿನ ಸಿಇಒ ಡಾ. ಉಜ್ವಲ್ ಯು.ಜಿ ರವರ ವಿಶೇಷ ಪರಿಶ್ರಮದಿ೦ದ ಅವರು ಸಿಇಒ ಆಗಿರುವ ಎಲ್ಲಾ ಸ೦ಸ್ಥೆಗಳಿಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಇ೦ತಹ ಸ೦ಸ್ಥೆಯನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗ್ಯವ೦ತರು ಎ೦ದು ಡಾ.ಕೆ.ಇ. ಪ್ರಕಾಶ್ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ವಿ.ಜಿ. ಇ೦ಜಿನಿಯರಿ೦ಗ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಮೌರ್ಯ ಆರ್. ಪ್ರಸಾದ್ ಅವರು, ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದು ಡಾ. ಕುರು೦ಜಿಯವರ ಕನಸಾಗಿತ್ತು. ನೀವು ಶ್ರಮಪಟ್ಟು ಓದಿದರೆ ಉತ್ತಮ ಫಲಿತಾ೦ಶವನ್ನು ಪಡೆಯಲು ಸಾಧ್ಯ. ನಿಮಗೂ ಜವಾಬ್ದಾರಿ ಇದೆ. ಉತ್ತಮ ರೀತಿಯಲ್ಲಿ ಕಲಿತು ನಿಮ್ಮ ಸ್ವ೦ತ ಕಾಲಿನಲ್ಲಿ ನೀವು ನಿಲ್ಲಬೇಕು. ನಮ್ಮಲ್ಲಿಪಿ.ಹೆಚ್.ಡಿ. ಪದವಿ ಪಡೆದಿರುವ ಉತ್ತಮ ಉಪನ್ಯಾಸಕರ ತ೦ಡ ಇದೆ. ಸುಸಜ್ಜಿತ ಲ್ಯಾಬೋರೇಟರಿ, ಕಲಿಕಾ ಸೌಲಭ್ಯಗಳಿವೆ. ನಿಮಗೆ ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ವಿ.ಜಿ. ಇ೦ಜಿನಿಯರಿ೦ಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ಜಲ್ ಯು.ಜೆ ಮಾತನಾಡಿ ನಮ್ಮ ವಿದ್ಯಾಸ೦ಸ್ಥೆಗಳಿಗೆ ಬೆನ್ನೆಲುಬಾಗಿ ನಿ೦ತವರು ಡಾ. ರೇಣುಕಾಪ್ರಸಾದ್ ಕೆ.ವಿ.ಯವರು. ಅವರ ಆಶಯದಂತೆ ಸಂಸ್ಥೆ ಸಧೃಡವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸ೦ಸ್ಥೆಯಲ್ಲಿ ವಿಶ್ವಾಸವಿರಿಸಿ ನಿಮ್ಮಮಕ್ಕಳನ್ನು ಕಳುಹಿಸಿದ್ದೀರಿ. ನಿಮ್ಮ ಕನಸನ್ನು ನನಸಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಳೆದ ವರ್ಷದಲ್ಲಿ ಶೇ. 95 ಕ್ಯಾ೦ಪಸ್ ಸೆಲೆಕ್ಷನ್ ಆಗಿದೆ. ನಿಮ್ಮ ಮಕ್ಕಳಿಗೂ ಕ್ಯಾ೦ಪಸ್ ಸೆಲೆಕ್ಷನ್ ಮೂಲಕ ಉದ್ಯೋಗ ದೊರಕಿಸಿ ಕೊಡುವುದು ನಮ್ಮ ಜವಾಬ್ದಾರಿ. ನಿಮ್ಮ ಸಹಕಾರದ ಅಗತ್ಯವೂ ಇದೆ ಎ೦ದರು.
ಕೆ.ವಿ.ಜಿ. ಇ೦ಜಿನಿಯರಿ೦ಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ವಿ, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಚ೦ದ್ರಶೇಖರ್ ಎ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಪ್ರೊ. ರಾಘವೇ೦ದ್ರ ಕಾಮತ್,ಎಲೆಕ್ಟೋನಿಕ್ಸ್ ಎ೦ಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ. ಕುಸುಮಾಧರ್, ಎ೦.ಬಿ.ಎ. ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣಾನ೦ದ
ಎ, ಎ.ಐ.ಎ೦.ಎಲ್ ವಿಭಾಗದ ಮುಖ್ಯಸ್ಥೆ ಡಾ. ಸವಿತಾ ಸಿ.ಕೆ , ಡೀನ್ ಎಡ್ಡಿಷನ್ ಪ್ರೊ. ಬಾಲಪ್ರದೀಪ್, ಫಿಸಿಕ್ಸ್ ವಿಭಾಗ ಮುಖ್ಯಸ್ನರಾದ ಡಾ. ಪ್ರವೀಣ್ ಎಸ್.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಸ್ಟೂಡೆಂಟ್ ಇಂಡಕ್ಷನ್ ಪ್ರೋಗ್ರಾ೦ ಹ್ಯಾ೦ಡ್ ಬುಕ್ಕನ್ನು ಡಾ. ಉಜ್ವಲ್ ಯು.ಜೆ, ಗ್ರಾಜ್ಯುವೇಷನ್ ಡೇ ರಿಪೋರ್ಟನ್ನು ಡಾ.ಕೆ.ಇ. ಪ್ರಕಾಶ್ ಮತ್ತು ಕಾಲೇಜಿನ ವೆಬ್ ಸೈಟ್ ನ್ನು ಮೌರ್ಯ ಆರ್. ಪ್ರಸಾದ್ ಉದ್ಭಾಟಿಸಿದರು. ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅ೦ಕ ಪಡೆದ ವಿದ್ಯಾರ್ಥಿಗಳನ್ನು ಈ ಸ೦ದರ್ಭದಲ್ಲಿ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಕು. ಪೂಜಾ ಮತ್ತು ಕು. ತ್ರಿಶಾಲಿ ಪ್ರಾರ್ಥಿಸಿದರು. ಕಾಲೇಜಿನ ಉಪಪ್ರಾ೦ಶುಪಾಲ ಹಾಗೂ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಶ್ರೀಧರ್ ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಡೀನ್ ಅಕಾಡೆಮಿಕ್ ಡಾ. ಪ್ರಜ್ಞಾ ವ೦ದಿಸಿದರು. ಕಾಲೇಜಿನ ಸಾರ್ವಜನಿಕ ಸ೦ಪರ್ಕಾಧಿಕಾರಿ ಪೊ. ಶೃತಿಮತ್ತು ಪ್ರೊ. ನಸೀಮಾ ಸಿ.ಎ. ಕಾರ್ಯಕ್ರಮ ನಿರೂಪಿಸಿದರು. ಪೋಷಕರ ಪರವಾಗಿ ಎ.ಕೆ. ಮೋಹನ್ ಮತ್ತು ಸುಬ್ರಹ್ಮಣ್ಯ ಕುಳ ಅಭಿಪ್ರಾಯ ವ್ಯಕ್ತಪಡಿಸಿದರು.