ಮದ್ರಸಾ ಪಬ್ಲಿಕ್ ಪರೀಕ್ಷೆ -ಸಂಪಾಜೆ ಪೇರಡ್ಕ ಗೂನಡ್ಕ ತೆಕ್ಕಿಲ್ ಮೊಹಮದ್ ಹಾಜಿ ಸ್ಮಾರಕ ತಕ್ವಿಯತುಲ್ ಇಸ್ಲಾಂ ಮದ್ರಸಕ್ಕೆ 100% ಫಲಿತಾಂಶ…

ಸುಳ್ಯ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಮದ್ರಸಾ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸಾ ಪೇರಡ್ಕ ಗೂನಡ್ಕ ಇಲ್ಲಿನ ವಿದ್ಯಾರ್ಥಿಗಳು ನೂರು ಶೇಕಡಾ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ಆ ಪೈಕಿ ಹತ್ತನೇ ತರಗತಿಯ ಆಯಿಶಾ ಟಿ.ಎಂ, ಏಳನೇ ತರಗತಿಯ ಫಾತಿಮತ್ ಝುಲ್ಫಾ, ರಝೀನಾ ಡಿ.ಎಚ್, ಮರ್ಯಂ ರಿಳಾ, ಐದನೇ ತರಗತಿಯ ಶನಾ ಫಾತಿಮಾ, ಫಾತಿಮತ್ ಶೈಬಾ ಮತ್ತು ಅಬ್ದುಲ್ ಹಾದಿ ಡಿಸ್ಟಿಂಕ್ಷನ್ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉಳಿದ ವಿದ್ಯಾರ್ಥಿಗಳಿಂದ ಆರು ಮಂದಿ ಪ್ರಥಮ ಶ್ರೇಣಿ ಮತ್ತು ಇಬ್ಬರು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಉತ್ತಮ ಶೈಕ್ಷಣಿಕ ಸಾಧನೆಯ ಮೂಲಕ ಮದ್ರಸಾ ಹಾಗೂ ಪೇರಡ್ಕ ಜಮಾಅತಿಗೆ ಕೀರ್ತಿ ತಂದ ವಿದ್ಯಾರ್ಥಿಗಳು, ಬೆಂಬಲ ನೀಡಿದ ಪೋಷಕರು ವಿದ್ಯಾರ್ಥಿಗಳಿಗೆ ಅತ್ಯುತ್ತಮ ತರಬೇತಿ ನೀಡಿದ ಅಧ್ಯಾಪಕರಿಗೆ ಮತ್ತು ಪೇರಡ್ಕ ಗೂನಡ್ಕ ಎಂ ಜೆ ಎಂ ಖತೀಬ್ ಉಸ್ತಾದ್ ನಹೀಮ್ ಫೈಜಿ ಅಲ್ ಮಅಬರಿ ಅವರಿಗೆ ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಮತ್ತು ಆಡಳಿತ ‌ಸಮಿತಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Related Articles

Back to top button