ಮಾಣಿಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ…
ಕ್ರೀಡಾಪಟುಗಳು ಅಧ್ಯಯನವನ್ನು ಪ್ರೀತಿಸಬೇಕು: ಪೈಯಡೆ...
ಬಂಟ್ವಾಳ ಅ.28 :ಕ್ರೀಡಾಪಟುಗಳು ಶೈಕ್ಷಣಿಕ ವಿಷಯಗಳಲ್ಲಿಯೂ ಸಾಧನೆ ಮಾಡಬೇಕು ಅಧ್ಯಯನವನ್ನು ಪ್ರೀತಿಸಬೇಕು. ಶ್ರದ್ದೆ ಭಕ್ತಿಯಿಂದ ಕಾರ್ಯ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಮುಂಬೈ ಉದ್ಯಮಿ ಮುಂಡಪ್ಪ ಎಸ್ ಪೈಯಡೆ ಹೇಳಿದರು.
ಅವರು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬಂಟ್ವಾಳ, ಕಲ್ಲಡ್ಕ ವಲಯ ಕ್ರೀಡಾಕೂಟ ಸಮಿತಿ ವತಿಯಿಂದ ಬಾಲವಿಕಾಸ ಆಂಗ್ಲಮಾದ್ಯಮ ಶಾಲೆ ಪೆರಾಜೆ ಮಾಣಿಯಲ್ಲಿ ಏರ್ಪಡಿಸಿದ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಗೌರವ ವಂದನೆ ಸ್ವೀಕರಿಸಿ ಮುಖ್ಯ ಅತಿಥಿಯಾಗಿ ಭಾಗವಸಿ ಮಾತನಾಡಿದರು.
ಮಾಣಿ ಬಾಲ ವಿಕಾಸ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಜೆ. 2 ದಿನಗಳ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಧ್ವಜಾರೋಹಣ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್ ಜಿ ಪಥ ಸಂಚಲನಕ್ಕೆ ಚಾಲನೆ ನೀಡಿದರು. ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಗೋಪಾಲ್ ಹೆಚ್ ಎ ಕ್ರೀಡಾ ಕೂಟದ ಪದಕಗಳ ಅನಾವರಣ ಮಾಡಿದರು.
ದೈಹಿಕ ಶಿಕ್ಷಕ ಪರಿವೀಕ್ಷಕ ಶಿವಪ್ರಸಾದ್ ರೈ ಪ್ರಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ , ರಾಜ್ಯ ದೈಹಿಕ ಶಿಕ್ಷಣ ಅಂಗದ ಅಧ್ಯಕ್ಷ ರಾಜೇಂದ್ರ ರೈ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಹರಿಪ್ರಸಾದ್ ,ದೈಹಿಕ ಶಿಕ್ಷಣ ಅಧ್ಯಕ್ಷ ಇಂಧು ಶೇಖರ್, ಚಿತ್ರಕಲಾ ಶಿಕ್ಷಕ ಸಂಘದ ಅಧ್ಯಕ್ಷ ಚೆನ್ನಕೇಶವ , ಜಿ.ಪಿ.ಟಿ. ಸಂಘ ಅಧ್ಯಕ್ಷ ಗುರುರಾಜ ಎನ್, ಸಿ.ಆರ್.ಪಿ. ಸತೀಶ್ ರಾವ್, ಮುಖ್ಯೋಪಾಧ್ಯಾಯಿನಿ ಸುಪ್ರೀಯ ಡಿ. , ಸರಕಾರಿ ನೌಕರ ಸಂಘದ ಅಧ್ಯಕ್ಷ ಉಮಾನಾಥ ರೈ, ಸುಭಾಷಿಣಿ ಶೆಟ್ಟಿ ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಲ್ಲಡ್ಕ ವಲಯ ಕ್ರೀಡಾಸಮಿತಿ ಅಧ್ಯಕ್ಷ ಕಮಲಾಕ್ಷ ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ್ ಶೆಟ್ಟಿ ಸ್ಮರಣಿಕೆ ನೀಡಿದರು. ಯಜ್ಞೇಶ್ವರಿ ಎನ್. , ಸುಧಾ ಎನ್ ರಾವ್ ನಿರೂಪಿಸಿದರು. ಜಗದೀಶ್ ಬಾಳ್ತಿಲ ವಂದಿಸಿದರು.