ಕೇರಳ ರಾಜ್ಯ ಸಭಾ ಅಭ್ಯರ್ಥಿಯಾಗಿ ಜಬಿ ಮಥರ್…

ಕೇರಳ: ಕೇರಳದ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಬಿ ಮಥರ್ ಕೇರಳದಿಂದ ನಡೆಯುವ ರಾಜ್ಯ ಸಭಾ ಅಭ್ಯರ್ಥಿಯಾಗಿದ್ದಾರೆ. ಕೆ ಎಸ್ ಯು (ಕೇರಳದ ವಿದ್ಯಾರ್ಥಿ ಘಟಕ) ಹಾಗು ಯುವಕ ಕಾಂಗ್ರೆಸ್ ನ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಯುವಕ ಕಾಂಗ್ರೇಸ್ ನ ಕಾರ್ಯದರ್ಶಿಯಾಗಿ ನಾಲ್ಕು ವರ್ಷಗಳ ಕಾಲ ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಮತ್ತು ಕೆಪಿಸಿಸಿಯ ಕಾರ್ಯದರ್ಶಿಯಾಗಿ ದುಡಿದಿರುವ ಇವರು ಪ್ರಸ್ತುತ ಆಲುವ ನಗರ ಸಭೆಯ ಉಪಾದ್ಯಕ್ಷೆಯಾಗಿದ್ದಾರೆ. ಬೆಂಗಳೂರಿನ ಎಂ ಎಸ್ ರಾಮಯ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ, ಕೋಚ್ಚೀನ್ ವಿಶ್ವವಿದ್ಯಾನಿಲಯದಲ್ಲಿ ಕಾನೂನಿನ ಸ್ನಾತಕೋತ್ತರ ಪದವಿ ಪಡೆದ ಇವರ ಪತಿ ಕೋಚ್ಚಿನ್ ನ ಪ್ರಮುಖ ವೈದ್ಯರಾದ ಇಶಾಂ. ತಂದೆ ಕೆ ಎಂ ಐ ಮಥರ್ ರವರು ಕೆಪಿಸಿಸಿ ಖಜಾಂಜಿ ಹಾಗೂ ಅಲ್ ಇಂಡಿಯಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ.
ಅಜ್ಜಂದಿರದ ದಿವಂಗತ ಕೆ ಐ ಮಥರ್ ಹಾಗೂ ದಿವಂಗತ ಟಿ ಒ ಬಾವರವರು ಕೆಪಿಸಿಸಿ (ಕೇರಳ )ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು ಇವರ ಸಹೋದರ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ದಿವಂಗತ ಸಿ ಎಂ ಇಕ್ಬಾಲ್ ಚೆಮನಾಡ್ ಹಾಗೂ ಅರಂತೋಡು ತೆಕ್ಕಿಲ್ ಟಿ ಎಂ ಜೈಬುನ್ನಿಸಾ ರವರ ಪುತ್ರಿ ಬೀನಾ ಮಥಾರ್ ರವರ ಪತಿ ಶಾಫಿ ಮಾಥರ್. ಇವರು ಕೇರಳ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿದ್ದರು. ಪ್ರಸ್ತುತ ದುಬಾಯಿಯಲ್ಲಿ ಉದ್ಯಮಿಯಾಗಿದ್ದಾರೆ.