ಹಾಸನದಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ವಿಚಾರಗೋಷ್ಠಿ -ಮೀಫ್ ಪ್ರತಿನಿಧಿಗಳು ಭಾಗಿ…
ಹಾಸನ: ಇಲ್ಲಿನ ನಂದ ಗೋಕುಲ ಕನ್ವೆನ್ಸನ್ ಸೆಂಟರ್ ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಗಳ ಆಡಳಿತ ಮಂಡಳಿ ಮುಖ್ಯಸ್ಥರ ಸಮಾವೇಶ ಮತ್ತು ರಾಜ್ಯ ಮಟ್ಟದ ಶೈಕ್ಷಣಿಕ ವಿಚಾರ ಸಂಕಿರಣ ನಡೆಯಿತು. ಮಿ2ವಿ ಒಕ್ಕೂಟದ ವತಿಯಿಂದ ಈ ಸಮಾವೇಶವನ್ನು ಆಯೋಜಿಸಲಾಗಿತ್ತು
ಮೀಫ್ ಸಂಸ್ಥೆ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ, ಉಪಾಧ್ಯಕ್ಷ ಮುಸ್ತಫ ಸುಳ್ಯ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶೇಖ್ ರಹ್ಮತುಲ್ಲಾ ಬುರೂಜ್,ಇಕ್ಬಾಲ್ ಕೃಷ್ಣಾಪುರ,ಶಾರಿಕ್ ನಿಕಟ ಪೂರ್ವ ಕಾರ್ಯದರ್ಶಿ ಬಿ. ಎ. ನಜಿರ್ ಮೊದಲಾದವರು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.
ಹಿರಿಯ ಐಎಎಸ್ ಅಧಿಕಾರಿ ಶ್ರೀಧರ್ ವೇದುಲಾ, ಕಲಿಕೆ ಮತ್ತು ಶೈಕ್ಷಣಿಕ ಗುಣಮಟ್ಟದ ಬಗ್ಗೆ, ಹೈಕೋರ್ಟ್ ವಕೀಲರಾದ ಸುದರ್ಶನ್ ಕಾನೂನು ಸಲಹೆ ಮತ್ತು ಕೋರ್ಟ್ ನಲ್ಲಿರುವ ವಿಷಯಗಳ ವಿಚಾರ ವಿನಿಮಯ ನಡೆಸಿದರು. ಮಕ್ಕಳ ಮಾನಸಿಕತೆ ಮತ್ತು ಆಡಳಿತ ನಿರ್ವಹಣೆ ಬಗ್ಗೆ ಧಾರವಾಡದ ಕಾರ್ಪೋರೇಟ್ ತರಬೇತುದಾರ ಮಹೇಶ್ ಪ್ರಸನ್ನ ವಿಷಯ ಮಂಡಿಸಿದರು.
ಟ್ರೈವೇ ಸಂಸ್ಥೆಯ ಸಯ್ಯದ್ ಸೈಫುಲ್ಲ ಇಂಗ್ಲೀಷ್ ಕ್ಯಾಂಪಸ್ ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಚಾಲಕ ಪ್ರಭಾಕರ ಅರಸ್, ಡಾ ರುದ್ರಯ್ಯ ಹಿರೇಮಠ್, ಪ್ರೊ. ದೇಶ್ ಮುಖ್, ಡಾ ಜಯಸಿಂಹ ಮಾಗಡಿ, ಸುಜನಾ ಕಾಲೇಜಿನ ಡಾ ಲೋಕೇಶ್, ದಾವಣಗೆರೆ ಅನುದಾನ ರಹಿತ ಆಡಳಿತ ಮಂಡಳಿಗಳ ಒಕ್ಕೂಟ ದ ಅಧ್ಯಕ್ಷ ಪ್ರಸನ್ನ, ಡಾ ವಿಜಯ ಕುಮಾರ್, ವಿನಾಯಕ ಸಿದ್ದಗೆರೆ, ಚಂದ್ರಶೇಖರ್ ಮೊದಲಾದವರು ಸೇರಿದಂತೆ ಸುಮಾರು 200 ಕ್ಕೂ ಮಿಕ್ಕಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು ಭಾಗವಹಿಸಿದ್ದರು.