ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಮಿತಿ ಸಭೆ…

ಸುಳ್ಯ: ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಸಂಪಾಜೆ ವಲಯ ಅಧ್ಯಕ್ಷ ರಾದ ಸೋಮಶೇಖರ ಕೈೂಂಗಾಜೆ ಯವರ ಅಧ್ಯಕ್ಷತೆಯಲ್ಲಿ ಸಂಪಾಜೆ ವ್ಯವಸಾಯ ಕೃಷಿ ಪತ್ತಿನ ಸಹಕಾರಿ ಸಂಘದ ಸಮನ್ವಯ ಸಭಾಭವನದಲ್ಲಿ ಅ.25 ರಂದು ನಡೆಯಿತು.
ಸಭೆಯಲ್ಲಿ ಪಕ್ಷ ಸಂಘಟನೆ ಗ್ರಾಮ ಪಂಚಾಯತ್ ಚುನಾವಣಾ ಸಿದ್ದತೆ ಬಗ್ಗೆ ಚರ್ಚಿಸಿ, ಐದು ವಾರ್ಡ್ ಗಳಿಗೆ ಸಮಿತಿ ನೇಮಕ ಮಾಡಿ, ಸಮಿತಿಯು ಪ್ರತಿ ವಾರ್ಡ್ ನಲ್ಲಿ ಅಯಾ ವಾರ್ಡ್ ಮತದಾರರ ಅಭಿಪ್ರಾಯ ಪಡೆದು ವಲಯ ಸಮಿತಿಗೆ ಸಲ್ಲಿಸುವುದು.ಅಭ್ಯರ್ಥಿಯನ್ನು ವಲಯ ಸಮಿತಿ ಆಯ್ಕೆ ಮಾಡುವುದು ಎಂದು ತೀರ್ಮಾನಿಸಲಾಯಿತಲ್ಲದೆ ಸಭೆಯಲ್ಲಿ ಹಲವು ಸಾರ್ವಜನಿಕ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು.
ಕೆಪಿಸಿಸಿ ಮಾಧ್ಯಮ ವಕ್ತಾರರಾದ ಶೌವಾದ್ ಗೂನಡ್ಕ ರವರನ್ನು ಸನ್ಮಾನಿಸಲಾಯಿತು . ವೇದಿಕೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾದ ಮಹಮ್ಮದ್ ಕುಂಞ ಗೂನಡ್ಕ,ಯಮುನಾ ಸಂಪಾಜೆ,ಸುಂದರಿ ಮುಂಡಡ್ಕ,ಮುಂತಾದವರು ಉಪಸ್ಥಿತರಿದ್ದರು .
ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.ಹಮೀದ್ ಸ್ವಾಗತಿಸಿ, ಅಬೂಸಾಲಿ ವಂದಿಸಿದರು.

65fc2e72 444c 40ff B748 E0eb9aea7c39 300x139

D42d91d1 3379 4e13 943e 677d2c787529 225x300

D51d56ed 2832 4af7 86f3 143b755afbab 300x225

0d064555 Ae8f 4662 9da9 0a3e68cf7261 300x225

 

Related Articles

Leave a Reply

Your email address will not be published. Required fields are marked *