ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಡಿ. 27 – 28 ರಂದು ಮಂಗಳೂರು ವಲಯದ ಫುಟ್ ಬಾಲ್ ಪಂದ್ಯಾಟ…

ಮೂಡುಬಿದ್ರಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ವಲಯದ ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಫುಟ್ ಬಾಲ್ ಪಂದ್ಯಾಟಗಳು ಮೂಡಬಿದ್ರೆಯ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಆತಿಥ್ಯದಲ್ಲಿ ಡಿ. 27 ಮತ್ತು 28 ರಂದು ನಡೆಯಲಿದೆ.
ಮೂಡಬಿದ್ರೆಯ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಸುಸಜ್ಜಿತ ಫುಟ್ ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಾಟದಲ್ಲಿ ಮಂಗಳೂರು ವಲಯದ 16 ತಾಂತ್ರಿಕ ಮಹಾವಿದ್ಯಾಲಯಗಳ ಬಾಲಕರ ತಂಡಗಳು ಭಾಗವಹಿಸಲಿವೆ. ಸುಮಾರು 200 ಕ್ಕಿಂತಲೂ ಅಧಿಕ ಕ್ರೀಡಾಳುಗಳು ಪಾಲ್ಗೊಳ್ಳಲಿದ್ದಾರೆ. ಪಂದ್ಯಾಟದ ಉದ್ಘಾಟನೆಯನ್ನು ಕರ್ನಾಟಕದ ಸಂತೋಷ್ ಟ್ರೋಫಿ ಆಟಗಾರರಾದ ಬಾವು ನಿಶಾದ್ ಮತ್ತು ರಿಯಾಜ್ ಪಿ ಟಿ ನೆರವೇರಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಜಿ. ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್ ಉಪಸ್ಥಿತರಿರುತ್ತಾರೆ.

Sponsors

Related Articles

Back to top button