ಬಡವರಿಗೆ ಅಶಸ್ತರಿಗೆ ಸಹಾಯ ಮಾಡಿ ಮಾದರಿಯಾದ ಸಂಯುಕ್ತ ಜಮಾತ್- ಟಿ ಎಂ ಶಾಹಿದ್ ತೆಕ್ಕಿಲ್ ಶ್ಲಾಘನೆ…
ಸುಳ್ಯ :ಸುಳ್ಯದ ಸುಪ್ರೀಂ ಹಾಲ್ ನಲ್ಲಿ ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ವತಿಯಿಂದ ಸುಳ್ಯ ತಾಲ್ಲೂಕಿನ 15 ಜಮಾಅತ್ ಗಳ ಸುಮಾರು 80 ಫಲಾನುಭವಿಗಳಿಗೆ ರಂಜಾನ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಪವಿತ್ರ ರಮ್ಜಾನ್ ತಿಂಗಳಲ್ಲಿ ಬಡ ಅಶಕ್ತ ಅರ್ಹ ವ್ಯಕ್ತಿಗಳಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವಂತೆ ಕರೆ ನೀಡಿ ಸಂಯುಕ್ತ ಜಮಾತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಬಯಂಬಾಡಿ ಮತ್ತು ಎಲ್ಲಾ ಪದಾಧಿಕಾರಿಗಳು ಪ್ರವಾದಿಯವರ ಆಶಯದಂತೆ ಹಲವಾರು ಜನಪರ, ಬಡವರ ಪರ ಮತ್ತು ಹಲವು ರೀತಿಯ ಸಹಾಯ ಮಾಡುವ ಮೂಲಕ ಸಂಸ್ಥೆಯ ಮಾದರಿಯಾಗಿದೆ ಎಂದು ಅಭಿನಂದಿಸಿದರು. ಬಯಂಬಾಡಿ ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಕೆಲಸ ಕಾರ್ಯ ಆಗಲಿ ಎಂದು ಆಶಿಸಿ ಕಿಟ್ ಗಳನ್ನು ವಿತರಿಸಿದರು.
ಅಧ್ಯಕ್ಷತೆಯನ್ನು ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕತ್ತರ್ ವಹಿಸಿದರು. ಕೋಶಾಧಿಕಾರಿ ಹಮೀದ್ ಹಾಜಿ ದುವಾ ನೆರವೇರಿಸಿದರು. ತಾಜ್ ಮೊಹಮ್ಮದ್ ಸಂಪಾಜೆ, ಸಿ ಎಚ್ ಮೊಹಮ್ಮದ್ ಪೈಂಬಚಾಲ್, ಹಂಸ ಅಜ್ಮಿರ್ ದೊಡ್ಡತೋಟ, ಕೆ ಎಂ ಅಬೂಬಕ್ಕರ್ ಪಾರೆಕ್ಕಲ್, ಹಾಜಿ ಅಹಮದ್ ಸುಪ್ರೀಂ, ಹಾಜಿ ಅಹಮದ್ ಪಾರೆ, ಸಂಪಾಜೆ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹಮಿದಿ ಯಾ, ಹಾಜಿ ಅಬ್ದುಲ್ ಖಾದರ್ ಅಜ್ಜಾವರ, ಶರೀಫ್ ರಿಲ್ಯಾಕ್ಸ್, ಜಮಾಲ್ ಬೆಳ್ಳಾರೆ, ಐವರ್ನಾಡ್ ಜುಮಾ ಮಸೀದಿ ಅಧ್ಯಕ್ಷ ಶರೀಫ್ ನೀಡುಬೆ, ಅಬೂಬಕ್ಕರ್ ಐವರ್ನಾಡ್, ಅಬ್ದುಲ್ಲ ಕನಕಮಜಲು, ಎ ಬಿ ಮೊಯಿದಿನ್ ಕಳಂಜ, ಇಸ್ಮಾಯಿಲ್ ಸಂಪಾಜೆ, ಪೇರಡಕ್ಕ ಜುಮಾ ಮಸೀದಿ ಕಾರ್ಯದರ್ಶಿ ಕೆ ಎಂ ಇಸ್ಮಾಯಿಲ್, ಸಿನಾನ್ ದರ್ಕಾಸ್ ಮೊದಲಾವರು ಉಪಸ್ಥಿತರಿದ್ದರು. ಪ್ರದಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





