ಎಸ್ ಕೆ.ಎಸ್.ಎಸ್ ಎಫ್ ವಿಖಾಯ ವತಿಯಿಂದ ಸುಳ್ಯ ತಾಲೂಕು ಆಸ್ಪತ್ರೆ ಯಲ್ಲಿ ಸ್ವಚತೆ ಕಾರ್ಯಕ್ರಮ…

ಸುಳ್ಯ: ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡದಿಂದ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಸುತ್ತಲೂ ಸ್ವಚತೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ ಕರುಣಾಕರ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಾಹಿದ್ ಪಾರೆ,ಚಂದ್ರನ್ ಕೂಟೀಲು ಇದ್ದರು .
ಸ್ವಚ್ಛತೆಯಲ್ಲಿ ಸುಳ್ಯ ವಿಜಲೆಂಟ್ ವಿಖಾಯ ಹಾಗೂ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಅಧ್ಯಕ್ಷ ಅಬೂಬಕ್ಕರ್ ಪೂಪಿ,ವಿಖಾಯ ಅಧ್ಯಕ್ಷ ಮಹಮ್ಮದ್ ಅಡ್ಕ,ಶರೀಫ್ ಸಿ. ಎ,ಉಮ್ಮರ್ ಬಿ.ಎಂ,ಜಲಾಲ್ ಅಡ್ಕಾರ್,ಅಬ್ದುಲ್ ರವೂಫ್ ಎಸ್ ಎಂ,ನಾಸಿರ್ ಮಾಬ್ಲಿ,ನಿಸಾರ್ ಪಾಲಡ್ಕ,ತಾಜುದ್ದೀನ್ ಅರಂತೋಡು, ಅನ್ಸ್ಯಾಫ್ ನಾವೂರು. ಸ್ವಚತೆಯಲ್ಲಿ ಭಾಗವಹಿಸಿದರು.
ಸುಳ್ಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡವು ನಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಆಸ್ಪತ್ರೆ ಸುತ್ತಲೂ ಮಳೆ ಇದ್ದರೂ ತಮ್ಮ ಬಿಡುವಿಲ್ಲದೆ ಕೆಲಸವನ್ನು ನೆರವೇರಿಸಿ ಮೊಹರಂ ಹಬ್ಬದ ಸಮಯದಲ್ಲಿ ಆಸ್ಪತ್ರೆ ಸುತ್ತಲೂ ಸ್ವಚ್ಛತೆಯನ್ನು ಮಾಡಿದ ತಂಡಕ್ಕೆ ಸುಳ್ಯ ವೈದ್ಯಾಧಿಕಾರಿ ಡಾ ಕರುಣಾಕರ ಅಭಿನಂದನೆ ಸಲ್ಲಿಸಿದರು.

whatsapp image 2025 07 06 at 3.19.06 pm (1)

whatsapp image 2025 07 06 at 3.19.06 pm

Related Articles

Back to top button