ಅರಂತೋಡು ಅಂತರಾಷ್ಟ್ರೀಯ ಯೋಗ ದಿನಾಚರಣೆ, ಶೈಕ್ಷಣಿಕ ದತ್ತು ನಿಧಿ ವಿತರಣೆ,ಆರೋಗ್ಯ ಮತ್ತು ಇಲಾಖಾ ಮಾಹಿತಿ ಕಾರ್ಯಗಾರ…

ಸುಳ್ಯ: ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 2025-2 6ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಶ್ರೀ ಕೆ.ಅರ್.ಆನಂದ ಕಲ್ಲುಗದ್ದೆ ಇವರ ದತ್ತಿನಿಧಿ ಯಿಂದ ವಿತರಿಸಲ್ಪಡುವ ನೋಟ್ ಪುಸ್ತಕ ಗಳ ವಿತರಣೆ, ಅಂತರಾಷ್ಟ್ರೀಯ ಯೋಗ ದಿನಾಚರಣೆ, ಮಕ್ಕಳ ಸುರಕ್ಷಾ ಕಾರ್ಯಕ್ರಮ, ಆರೋಗ್ಯ ಮಾಹಿತಿ ಹಾಗೂ ಇಲಾಖಾ ಕಾರ್ಯಗಾರ ಜೂನ್ 21.ರಂದು ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯು.ಡಿ.ಶೇಖರ ಸಭಾ ವೇದಿಕೆಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ವಹಿಸಿದ್ದರು .ಕಾರ್ಯಗಾರ ಉದ್ಘಾಟನೆಯನ್ನು ಸುಳ್ಯ ಠಾಣೆಯ ಪೊಲಿಸ್ ಎ ಎಸ್ ಐ ತಾರಾನಾಥ ನೆರವೇರಿಸಿದರು.ಶ್ರೀಮತಿ ಚಿನ್ನಮ್ಮ ಕಲ್ಲುಗದ್ದೆ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ವಿತರಿಸಿದ್ದರು.ಪ್ರಶ್ವಿಜ ಮುಂಡೋಕಜೆರವರು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಮಾಹಿತಿ ನೀಡಿದ್ದರು. ಮಕ್ಕಳ ಸುರಕ್ಷತೆ ಹಾಗೂ.ಕಾನೂನು ಅರಿವು ಬಗ್ಗೆ ಸುಳ್ಯ ಠಾಣಾ ಎ ಎಸ್ ಐ ತಾರಾನಾಥ ಮಾಹಿತಿ ನೀಡಿದ್ದರು.ಸುಳ್ಯ ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಬಿ.ಯವರು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು.ಶಾಲೆಯ ಸಹ ಶಿಕ್ಷಕಿ ಶ್ರೀ ಮತಿ ಭಾನುಮತಿ ಎಸ್ ಬಿ ರವರು ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿ ನೀಡಿದ್ದರು.ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬನ,ಎಸ್.ಡಿ.ಎಂ.ಸಿ.ಅಧ್ಯಕ್ಷ ಸುರೇಶ್ ಯು.ಕೆ.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್,ಕೆಡಿಪಿ ಸದಸ್ಯ ಅಶ್ರಫ್ ಗುಂಡಿ, ಉಪಸ್ಥಿತಿದ್ದರು.ಶಾಲೆಯ ಜಿ ಪಿಟಿ ಶಿಕ್ಷಕಿ ರೇಶ್ಮಾ ,ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಧನಂಜಯ ಮರ್ಕಜೆ ಸೇರಿದಂತೆ ಸಹ ಶಿಕ್ಷಕಿಯರು ಸಹಕರಿಸಿದರು.ಶಾಲೆಯ ವಿದ್ಯಾರ್ಥಿ ನಿಯರು ಪ್ರಾರ್ಥಿಸಿದರು. ಶಾಲೆಯ ಮೋಖ್ಯೋಪದ್ಯಾಯ ಗೋಪಾಲಕೃಷ್ಣ ಬನ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಪಿಟಿ ಶಿಕ್ಷಕಿ ಶ್ರೀಮತಿ ರೇಣುಕಾ ಕಾರ್ಯಕ್ರಮ ನಿರೂಪಿಸಿದರು.

whatsapp image 2025 07 06 at 8.18.24 am (1)

whatsapp image 2025 07 06 at 8.18.25 am

Sponsors

Related Articles

Back to top button