ಗೂನಡ್ಕದಲ್ಲಿ ಪುತ್ರಿಕಾರ್ಸ್ ಕುಟುಂಬ ಸಮ್ಮಿಲನ…
ಸಪ್ತ ಸಾಗರಗಳ ಅಲೆಗಳು ಹಾಲ್ನೊರೆಯಾಗಿ ಹೊಮ್ಮಿದ ಕ್ಷಣ...

ಸುಳ್ಯ: ಪುತ್ರಿಕ್ಕಾರ್ಸ್ ಚಾರಿಟೇಬಲ್ ಫೌಂಡೇಶನ್ ಗೂನಡ್ಕ ಇದರ ಅಧೀನದಲ್ಲಿ ಸಂಘಟಿಸಲ್ಪಟ್ಟ ಪುತ್ರಿ ಉಮ್ಮರ್ಚ ಕುಟುಂಬದ ಮಹಾ ಸಮ್ಮಿಲನ ಕಾರ್ಯಕ್ರಮ. ಜೂ 29ರಂದು ಸಜ್ಜನ ಸಭಾ ಭವನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ 7 ಘಂಟೆಗೆ ಪೇರಡ್ಕ ಮಖಾಂ,ಹಾಗೂ ಅಗಲಿದ ಹಿರಿಯರ ಖಬರ್ ಝಿಯಾರತ್ ನೊಂದಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು.
9ಘಂಟೆಗೆ ಸದಸ್ಯರ ನೊಂದಣಿ ನಡೆಸಲಾಯಿತು .ನಂತರ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಪುತ್ರಿ ಕಾರ್ಸ್ ಕುಟುಂಬ ಸಮ್ಮಿಲನದ ಅದ್ಯಕ್ಷರಾದ ಪಿ ಎ ಉಮ್ಮರ್ ಹಾಜಿ ವಹಿಸಿದರು .ಕಾರ್ಯಕ್ರಮದ ಉದ್ಘಾಟನೆಯನ್ನು. ಟಿ.ಬಿ.ಉಮ್ಮರ್ ನೆರವೇರಿಸಿ ಮಾತನಾಡಿ ಕುಟುಂಬ ನಡೆದು ಬಂದ ಹಾದಿಯನ್ನು ವಿವರಿಸಿದರು. ನಂತರ ಕುಟುಂಬ ಸದಸ್ಯರಿಗೆ ವಿವಿಧ ರೀತಿಯ ಕಲಾ, ಸಾಹಿತ್ಯ ಕ್ರೀಡಾ ಸ್ಪರ್ಧೆಗಳು ನಡೆಸಲಾಗಿತು. ಹಗ್ಗ ಜಗ್ಗಾಟ ಸ್ಪರ್ಧೆ ಬಹಳ ಪೈಫೊಟಿಯಿಂದ ನೋಡುಗರ ಕಣ್ಮನ ಸೆಳೆಯಿತು.
ಮಹಿಳೆಯರಿಗೆ ಪ್ರತ್ಯೇಕವಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕುಟುಂಬ ಸದಸ್ಯ ರಾದ ಸಾದಿಕ್ ಮಾಸ್ತರ್, ಇಜಾಝ್, ಕಾದರ್ ಮೊಟ್ಟೆಂಗಾರ್,ಹನೀಫ್ ಕ್ರೀಡಾ ಉಸ್ತುವಾರಿ ವಹಿಸಿದರು. ಕಾರ್ಯಕ್ರಮದಲ್ಲಿ ಕುಟುಂಬದಲ್ಲಿ ವಿಶೇಷ ಸಾದನೆ ಗೈದ ಮತ್ತು ಕಳೆದ ಶೈಕ್ಷಣಿಕ ವರ್ಷದಲ್ಲಿಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಜೆ 7.30 ಸಮಾರೊಪ ಸಮಾರಂಭ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಳ್ಯ ಪತ್ರ ಕರ್ತರ ಸಂಘದ ಅದ್ಯಕ್ಷರಾದ ಶರೀಪ್ ಜಟ್ಟಿಪಳ್ಳ
ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಎನ್ ಎಸ್ ಯು ಐ ನಾಯಕರಾದ ಉಬೈಸ್ ಗೂನಡ್ಕ ಮಾತನಾಡಿ ಯುವಕರನ್ನು ಪ್ರೊತ್ಸಾಹಿಸಿದರು ಕಾದರ್ ಮೊಟ್ಟೆಂಗಾರ್ ಮಾತನಾಡಿ ಪುತ್ರಿ ಉಮ್ಮರ್ಚಾ ರವರು ಊರಿನಲ್ಲಿ ನೆಲೆಸಿ ಧಾರ್ಮಿಕ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಿ ಧಾರ್ಮಿಕ ಶಿಕ್ಷಣದ ಗುರುಗಳಾಗಿ ಸೇವೆ ಸ ಲ್ಲಿಸಿರುವುದು ನಮಗೆಲ್ಲ ಮಾದರಿ ಎಂದುವಿವರಿಸಿದರು.
ನಂತರ ಪ್ರಸುತ ಸನ್ನಿವೇಶದಲ್ಲಿ ಕುಟುಂಬ ನಿರ್ವಹಣೆಯಲಿ ಕುಟುಂಬಸ್ತರು ಪಾಲಿಸಬೇಕಾದ ಜವಾಬ್ದಾರಿ ಎಂಬ ವಿಷಯಗಳ ಕುರಿತು ಖ್ಯಾತ ವಾಗ್ಮಿ ಮುದುಗುಡ ಅಬ್ದುಲ್ ಖಾದರ್ ಸಖಾಪಿ ಪ್ರವಚನ ನೀಡಿದರು.
ಪುತ್ತಿರಿಕಾರ್ಸ್ ಚಾರಿಟಿ ಫೌಂಡೇಶನಿನ ಕಾರ್ಯಾಧ್ಯಕ್ಷ ಕುಟುಂಬ ಸಮ್ಮಿಲನ
ಕಾರ್ಯಕ್ರಮದ ನಿರ್ವಹಣಾ ಸಮಿತಿ ಸಂಚಾಲಕರೂ ಆದ ಉಮ್ಮರ್ ಪುತ್ತಿರಿ ಸಂದೇಶ ಭಾಷಣ ಮಾಡಿದರು.
ಹಿರಿಯ ಸದಸ್ಯರುಗಳಾದ ಪಿ ಕೆ ಉಮ್ಮರ್, ಎನ್ ಕೆ ಮುಹಮ್ಮದ್ ಕಿಯೂರ್,
ಟಿ ಕೆ ಅಬ್ದುಲ್ಲಾ,ಟಿ ಬಿ ಅಬ್ದುಲ್ಲಾ,ಪಿ ಎಂ ಉಮ್ಮರ್ ಚಕ್ರ ನಗರ, ಸೇರಿದಂತೆ ಪುತ್ತಿರಿ ಕುಟುಂಬದ ಬಹುತೇಕ ಸದಸ್ಯರು ಪಾಲ್ಗೊಂಡಿದ್ದರು.
ಇಜಾಝ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.