ಅರಂತೋಡು: ಬೈಕ್‌ ಬಸ್‌ ಡಿಕ್ಕಿ – ಓರ್ವ ಸಾವು…

ಸುಳ್ಯ: : ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ವಿದ್ಯಾರ್ಥಿ ಮೃತಪಟ್ಟ ಘಟನೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡು ಎಂಬಲ್ಲಿ ಫೆ.8 ರಂದು ನಡೆದಿದೆ.

ಮೃತನನ್ನು ಮಡಿಕೇರಿ ತಾಲೂಕಿನ ಎರಡನೇ ಮೊಣ್ಣಂಗೈರಿ ನಿವಾಸಿ, ಮದೆನಾಡು ಸ.ಪ.ಪೂ.ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿ ವಿನೀತ್ ಕೆ.ಎಂ( 16) ಎಂದು ಗುರುತಿಸಲಾಗಿದೆ. ಇನ್ನೋರ್ವ ಹಿಂಬದಿ ಸವಾರ ರಾಜಪ್ಪ (22) ನಿಗೆ ಗಂಭೀರ ಗಾಯವಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಸಂಜೆ ಸುಳ್ಯ ಕಡೆ ಬರುತ್ತಿದ್ದ ಬೈಕನ್ನು ವಿನೀತ್‌ ಚಲಾಯಿಸುತ್ತಿದ್ದು ಅರಂತೋಡು ಎಂಬಲ್ಲಿ ಸವಾರನ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಬೈಕ್‌ ಸವಾರನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಬೈಕ್‌ ಚಲಾಯಿಸುತ್ತಿದ್ದ ಎಂದು ಹೇಳಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Accident Sulia 300x146

Related Articles

Leave a Reply

Your email address will not be published. Required fields are marked *