ಜಮೀಯ್ಯತುಲ್ ಫಲಾಹ್ ಸುಳ್ಯ ತಾಲೂಕು ಘಟಕ ದ ವತಿಯಿಂದ 100 ಅರ್ಹ ಕುಟುಂಬಗಳಿಗೆ ಪವಿತ್ರ ರಂಜಾನ್ ಪ್ರಯುಕ್ತ ಆಹಾರ ಸಾಮಾಗ್ರಿ ವಿತರಣೆ…

ಆತ್ಮ ಸಂಸ್ಕರಣೆಯ ಉಪವಾಸ ವೃತ ಧನ್ಯಗೊಳ್ಳುವುದು ದಾನ ಧರ್ಮಗಳಿಂದ- ಕೆ. ಎಂ. ಮುಸ್ತಫ...

ಸುಳ್ಯ: ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ. ಕ. ಮತ್ತು ಉಡುಪಿ ಜಿಲ್ಲೆ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಸುಳ್ಯ ತಾಲೂಕು ಘಟಕದ ವತಿಯಿಂದ ಸುಳ್ಯ ತಾಲೂಕಿನ ಅರ್ಹ ಫಲಾನುಭವಿ ಕುಟುಂಬಗಳಿಗೆ ದಿನನಿತ್ಯ ಉಪಯೋಗದ ರೂ. 2 ಲಕ್ಷ ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಗಾಂಧಿನಗರ ಸಂಸ್ಥೆಯ ಕಚೇರಿ ವಠಾರದಲ್ಲಿ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಅಡ್ವೋಕೇಟ್ ಮೂಸ ಕುಂಞ ಪೈoಬಚ್ಚಾಲ್ ವಹಿಸಿದ್ದರು.
ಸಮಾರಂಭವನ್ನು ಕಿಟ್ ವಿತರಿಸುವ ಮೂಲಕ ಉದ್ಘಾಟಿಸಿದ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ ಪವಿತ್ರ ರಂಜಾನ್ ತಿಂಗಳು ಬಡವನ ಹಸಿವಿನ ಅರಿವಾಗಲು ಎಲ್ಲರಿಗೂ ಖಡ್ದಾಯ ಉಪವಾಸ ವೃತವನ್ನು ಇಸ್ಲಾಂ ಕಲ್ಪಿಸಿದೆ, ದಾನ ಧರ್ಮಗಳ ಮೂಲಕ ದೇವರ ಸಂಪ್ರೀತಿಯನ್ನು ಗಳಿಸಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದಾದಿಕಾರಿಗಳಾದ ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು, ಇಕ್ಬಾಲ್ ಎಲಿಮಲೆ, ಹಸೈನಾರ್ ವಳಲoಬೆ, ಶಾಫಿ ಕುತ್ತಾಮೊಟ್ಟೆ, ಅಬ್ದುಲ್ ಖಾದರ್ ಸoಗಮ್,ಹಸೈನಾರ್ ಹಾಜಿ ಗೊರಡ್ಕ, ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ,ಎಸ್. ಪಿ ಅಬೂಬಕ್ಕರ್, ಡಾ. ಮಹಮ್ಮದ್ ಕುಂಭಕ್ಕೊಡು, ಇಬ್ರಾಹಿಂ ನೀರಾಬಿದಿರೆ ದುಗ್ಗಲಡ್ಕ,ಹಂಝ ದುಗ್ಗಲಡ್ಕ, ಎಸ್. ಕೆ. ಹನೀಫ್ ಕಲ್ಲುಗುಂಡಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button