ಸುಳ್ಯ ಕಾಂಗ್ರೆಸ್ ನಾಯಕರಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ…
ಕೆ.ಎಫ್.ಡಿ. ಸಿ. ಕಾರ್ಮಿಕರ ಸಮಸ್ಯೆಗಳಾದ ಬೋನಸ್,ತಾತ್ಕಾಲಿಕ ನೌಕರರ ಖಾಯಮಾತಿಗೆ ಕ್ರಮ ಕೈಗೊಳ್ಳುವಂತೆ ಮನವಿ...

ಸುಳ್ಯ: ಸುಳ್ಯ ಕಾಂಗ್ರೆಸ್ ಧುರೀಣರುಗಳಾದ ಮಾಜಿ ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪಗೌಡ, ಕೆಪಿಸಿಸಿ ಸಂಯೋಜಕ ಎಸ್ ಸಂಶುದ್ದೀನ್, ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಅರಣ್ಯ ಸಚಿವ ಈಶ್ವರ್ ಖಂಡ್ರೆ ಯವರನ್ನು ಭೇಟಿ ಮಾಡಿ ದೀಪಾವಳಿಗೆ ಮುಂಚಿತವಾಗಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಕಾರ್ಮಿಕರಿಗೆ ಬೋನಸ್ ನೀಡುವಂತೆಯೂ, ತಾತ್ಕಾಲಿಕ ನೌಕರರನ್ನು ಖಾಯಮಾತಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರೊಂದಿಗೆ ಸುಳ್ಯಕ್ಕೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಪ್ತ ಸಹಾಯಕರಿಗೆ ಈ ಬಗ್ಗೆ ಗಮನ ಹಾರೈಸುವಂತೆ ಸೂಚಿಸಿದರು. ನಗರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶಹೀದ್ ಪಾರೆ ಉಪಸ್ಥಿತರಿದ್ದರು.