ಡಾ. ಶಾಂತಾ ಪುತ್ತೂರುರವರಿಗೆ ಕವಿ ಕಾವ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ…
ಕಾಸರಗೋಡು:ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಇದರ ವಾರ್ಷಿಕೋತ್ಸವದ ಅಂಗವಾಗಿ ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಕಾಸರಗೋಡು – ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಫೆ.22 ರಂದು ನಡೆಯಿತು.
ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಬೊಳುವಾರು ನಿವಾಸಿ ಡಾ. ಶಾಂತಾ ಪುತ್ತೂರುರವರಿಗೆ ಕವಿ ಕಾವ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ. ಶಾಂತಾ ಪುತ್ತೂರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕರಾಗಿದ್ದು ಇವರ ಸೌರಭ ಕವನ ಸಂಕಲನ ಬಿಡುಗಡೆಗೊಂಡಿದೆ. ವೇದಿಕೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು ಸಾ|| ಗೋನಾಳ ತಾಲೂಕು ಲಕ್ಷ್ಮೇಶ್ವರ ಡಾ. ವಾಮನ್ ರಾವ್ ಬೇಕಲ್ ಸಂಸ್ಥಾಪಕರು ಕನ್ನಡ ಭವನ ,ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಕೆ.ಎನ್. ವೆಂಕಟರಮಣ ಹೊಳ್ಳ ,ಶ್ರೀ ಜಯಾನಂದ ಪೆರಾಜೆ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕರು , ಶ್ರೀ ವಿಶಾಲಾಕ್ಷ ಪುತ್ರಕಳ ಸಂಘಟನಾ ಕಾರ್ಯದರ್ಶಿ ಕ.ಸಾ.ಪ. ಕೇರಳ ಗಡಿನಾಡ ಘಟಕ, ಶ್ರೀ .ನಮ್. ವಿಜಯಕುಮಾರ್ ಕನ್ನಡ ಕಟ್ಟಾಳು ಕ.ರ.ವೇ. ಬೆಂಗಳೂರು ಕರ್ನಾಟಕ ರಾಜ್ಯ ಸಂಚಾಲಕರು, ಡಾ. ಸಂ.ವೆಂ. ತಮ್ಮನಗೌಡ್ರ ಕನ್ನಡ ಭವನ ಗದಗ ಜಿಲ್ಲಾಧ್ಯಕ್ಷರು, ಡಾ. ಕೆ.ಜಿ. ವೆಂಕಟೇಶ್ ಕನ್ನಡ ಭವನ ಶಿವಮೊಗ್ಗ ಜಿಲ್ಲಾಧ್ಯಕ್ಷರು ,ಡಾ. ಸುರೇಶ ನೆಗಳಗುಳಿ ಸಾಹಿತಿಗಳು,, ವಿರಾಜ್ ಅಡೂರು ಜಿಲ್ಲಾಧ್ಯಕ್ಷರು ಕೇರಳ ರಾಜ್ಯ ಚುಟುಕು ಸಾಹಿತ್ಯ ಪರಿಷತ್ ಕಾಸರಗೋಡು, ಶ್ರೀಮತಿ ಶಾರದಾ ಮೊಳೆಯಾರ್ ಸಂಘಟನಾ ಕಾರ್ಯದರ್ಶಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕಾಸರಗೋಡು ಉಪಸ್ಥಿತರಿದ್ದರು.




